Site icon Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಸನ್‌ರೈಸ್ ಅಧ್ಯಕ್ಷರಾಗಿ ಕೆ. ನರಸಿಂಹ ಹೊಳ್ಳ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾಗಿ ಕುಂದಾಪುರ ವ್ಯ. ಸೇ. ಸಹಕಾರಿ ಸಂಘ(ನಿ.) ವಡೇರಹೋಬಳಿ ಶಾಖೆಯ ವ್ಯವಸ್ಥಾಪಕ ಕೆ. ನರಸಿಂಹ ಹೊಳ್ಳ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ನಾಗೇಶ ನಾವಡ, ಕ್ಲಬ್ ಸರ್ವಿಸ್‌ನ ನಿರ್ದೇಶಕರಾಗಿ ಬಿ. ಎಮ್. ಚಂದ್ರಶೇಖರ, ಒಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಶಿವಾನಂದ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ದಿನೇಶ್ ಗೋಡೆ, ಇಂಟರ್‌ನ್ಯಾಶನಲ್ ಸರ್ವಿಸ್ ನಿರ್ದೇಶಕರಾಗಿ ಉಲ್ಲಾಸ್ ಕ್ರಾಸ್ತಾ, ಯೂತ್ ಸರ್ವಿಸ್ ನಿರ್ದೇಶಕರಾಗಿ ರಾಜು ಪೂಜಾರಿ, ಸತೀಶ್ ಎನ್. ಶೇರೆಗಾರ್(ಟಿಆರ್‌ಎಫ್ ಛೇರ್‌ಮೆನ್), ಅಬುಶೇಖ್ ಸಾಹೇಬ್(ಪೋಲಿಯೋ ಪ್ಲಸ್ ಛೇರ್‌ಮೆನ್), ಅಜಯ್ ಹವಲ್ದಾರ್ (ವಾಷಿಂಗ್ ಸ್ಕೂಲ್ ಛೇರ್‌ಮೆನ್), ದಿನಕರ್ ಆರ್ ಶೆಟ್ಟಿ (ಲಿಟ್ರಸಿ ಛೇರ್‌ಮೆನ್), ದಂಡಪಾಣಿಯಾಗಿ ಸದಾನಂದ ಉಡುಪ, ಕೋಶಾಧಿಕಾರಿಯಾಗಿ ಸಿ.ಎಚ್. ಗಣೇಶ್, ಬುಲೆಟಿನ್ ಎಡಿಟರ್ ಗಜಾನನ ಭಟ್, ನಿಯೋಜಿತ ಅಧ್ಯಕ್ಷರಾಗಿ ಕಲ್ಪನಾ ಭಾಸ್ಕರ್ ಆಯ್ಕೆಯಾದರು. ಜುಲೈ 3ರಂದು ಸಂಜೆ 7ಗಂಟೆಗೆ ಕೋಟೇಶ್ವರದ ಸಹನಾ ಕನ್‌ವೆನ್‌ಶನ್ ಸೆಂಟರ್‌ನಲ್ಲಿ ಪದಾಪ್ರದಾನ ಸಮಾರಂಭ ನಡೆಯಲಿದೆ.

Exit mobile version