ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪ್ರತಿಷ್ಠಿತ ಆರ್ಯಭಟ ಇಂಟರ್‌ನ್ಯಾಶನಲ್ ಅವಾರ್ಡ್‌ನ್ನು ಪಡೆದ ಗಾಯಕ, ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸತೀಶ್ ಪೂಜಾರಿ ಅವರನ್ನು ವೈದ್ಯರ ದಿನಾಚರಣೆಯ ಅಂಗವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ವತಿಯಿಂದ ಸನ್ಮಾನಿಸಲಾಯಿತು.
ಮಣಿಪಾಲ ಕೆಎಂಸಿ ಆಸಪತ್ರೆಯ ಸರ್ಜರಿ ವಿಭಾಗದ ಪ್ರೋಫೆಸರ್ ರಾಜ್‌ಗೋಪಾಲ ಶೆಣೈ ಅವರು ಸತೀಶ್ ಪೂಜಾರಿಯವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಐಎಂಎ ಕುಂದಾಪುರ ಅಧ್ಯಕ್ಷೆ ಡಾ. ಭವಾನಿ ರಾವ್, ಖ್ಯಾತ ಮನೋರೋಗ ತಜ್ಞ ಡಾ. ಕೆ. ಎಸ್. ಕಾರಂತ್, ಐಎಂಎ ಕಾರ್ಯದರ್ಶಿ ಶ್ರೀದೇವಿ ಕಟ್ಟೆ, ಡಾ.ರಮೇಶ್ ರಾವ್, ಶ್ರೀಮತಿ ಸುಜಾತ ಉಪಸ್ಥಿತರಿದ್ದರು.