Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪರ: ಛಾಯಾಗ್ರಾಹಕ ಸಂಘದಿಂದ ಒಂದು ದಿನದ ಛಾಯಾಗ್ರಹಣ ಬಂದ್ ಯಶಸ್ವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಛಾಯಾಗ್ರಾಹಕರ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟು ಒಂದು ದಿನದ ಶಾಂತಿಯುತ ಛಾಯಾಗ್ರಹಣ ಬಂದ್ ರಾಜ್ಯಾದ್ಯಂತ ನಡೆದಿದ್ದು, ಕುಂದಾಪುರದಲ್ಲಿ ಸೌತ್ ಕೆನರಾ ಪೋಟೋಗ್ರಾಫರ‍್ಸ್ ಅಸೋಸಿಯೇಶನ್ ಕುಂದಾಪುರ ವಲಯದಿಂದ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯದಲ್ಲಿರುವ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಛಾಯಾ ಮತ್ತು ವೀಡಿಯೋ ವೃತ್ತಿ ಬಾಂಧವರು ಅನುಭವಿಸುತ್ತಿರುವ ಸಂಕಷ್ಟಗಳ ಮತ್ತು ಅವುಗಳ ಪರಿಹಾರವನ್ನು ಕೋರಿ ಇಂದು ಕುಂದಾಪುರ ವಲಯ ಛಾಯಾಗ್ರಾಹಕರು ಶಾಂತಿಯುತ ಬಂದ್ ಆಚರಿಸಿ ಮೆರವಣಿಗೆಯ ಮೂಲಕ ಆಗಮಿಸಿ ಕುಂದಾಪುರ ಎಸಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಕುಂದಾಪುರ ತಾಲೂಕು ಕಛೇರಿಯ ಎದುರು ಶಾಸಕರಿಗೆ ಮನವಿಯನ್ನು ಕೊಟ್ಟು ನಂತರ ಮೆರವಣಿಗೆಯ ಮೂಲಕ ಏಸಿ ಕಛೇರಿಗೆ ಹೋಗಿ ಅಲ್ಲಿ ಕುಂದಾಪುರ ಏಸಿ ಯವರಿಗೆ ಮನವಿಯನ್ನು ನೀಡಲಾಯಿತು ಏಸಿ ಪರವಾಗಿ ಪ್ರಭಾರ ತಹಶೀಲ್ದಾರ್ ಕಿರಣ್ ಗೋರಯ್ಯ ಇವರು ಮನವಿಯನ್ನು ಸ್ವೀಕರಿಸಿದರು.

ಕುಂದಾಪುರ ಛಾಯಾಗ್ರಾಹಾಕರ ಸಂಘದ ಅಧ್ಯಕ್ಷ ಗ್ರೇಷನ್ ಡಿಸೋಜಾ, ಉಪಾದ್ಯಕ್ಷ ರಾಜಾ ಮಠದಬೆಟ್ಟಿ, ಗಿರೀಶ್ ಚಿತ್ತೂರು ಸಲಹಾ ಸಮಿತಿಯ ಗಿರೀಶ್, ನಿಕಟಪೂರ್ವ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಸಲಹಾಕಾರ್ಯದರ್ಶಿ ಉದಯ ಕುಮಾರ್, ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿಯ ಸದಸ್ಯರುಗಳು ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ಧರು.

ಕರ್ನಾಟಕ ಛಾಯಾಚಿತ್ರಗ್ರಾಹಕರ ಈ ಶಾಂತಿಯುತ ಪ್ರತಿಭಟನೆಗೆ ಸಿಐಟಿಯು ಸಂಘಟೆಯವರು ಕೈಜೋಡಿಸಿದರು ಸಂಘದ ಅಧ್ಯಕ್ಷ ಎಚ್. ನರಸಿಂಹ, ಸುರೇಶ್ ಕಲ್ಲಾಗಾರ್ ಮೊದಲಾದವರು ಉಪಸ್ಥಿತರಿದ್ಧರು.

Exit mobile version