Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶ್ರೀ ವ್ಯಾಸರಾಜ ಮಠ ವೃಂದಾವನ ಸಮರ್ಪಣೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಾಣಿಗ ಸಮಾಜದ ಪ್ರಮುಖ ಶಕ್ತಿ ಪೀಠವಾದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಶ್ರೀ ವ್ಯಾಸರಾಜ ಮಠದ ಜೀರ್ಣೊದ್ಧಾರ ಕಾರ್ಯ ಹಂತಿಮ ಹಂತದಲ್ಲಿದ್ದು ಇದರ ನೂತನ ವೃಂದಾವನ ಸಮರ್ಪಣೆ ಕಾರ್ಯಕ್ರಮ ಶನಿವಾರ ಮಠದ ವಠಾರದಲ್ಲಿ ನಡೆಯಿತು. ವೇದಮೂರ್ತಿ ವಿಜಯ ಪೆಜತ್ತಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವೃಂದಾವನ ದಾನಿಗಳಾದ ಶಾರದಾ ಪುಂಡಲೀಕ ಗಾಣಿಗ, ಉದ್ಯಮಿ ನಿತ್ಯಾನಂದ ಗಾಣಿಗ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರ ನಾರಾಯಣ ಗಾಣಿಗ ಬೀಜಾಡಿ, ಕುಂದಾಪುರ ಟಿಂಬರ್ ಡಿಪೊ ಮಾಲೀಕ ಗೋಪಾಲ ಗಾಣಿಗ, ಗ್ರಾಮ ಪಂಚಾಯಿತಿ ಸದಸ್ಯ ರವಿ ಗಾಣಿಗ ಆಜ್ರಿ, ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಗಾಣಿಗ, ಹಿರಿಯರಾದ ಕೊಗ್ಗ ಮಾಸ್ಟರ್, ನರಸಿಂಹ ಗಾಣಿಗ ಹಂಗಳೂರು ಉಪಸ್ಥಿತರಿದ್ದರು.

Exit mobile version