Kundapra.com ಕುಂದಾಪ್ರ ಡಾಟ್ ಕಾಂ

ಕೃಷಿಗದ್ದೆಗಳಿಗೆ ಹೆದ್ದಾರಿಯ ಜೆಡಿಮಣ್ಣು ತುಂಬಿ ಹಾನಿ. ಬೈಂದೂರು ಶಾಸಕರ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವ್ಯಾಪ್ತಿಯ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ಕೃಷಿ ಭೂಮಿಗಳಿಗೆ ಜೇಡಿ ಮಣ್ಣು ತುಂಬಿಕೊಂಡಿದ್ದು, ಕೃಷಿ ಕಾರ್ಯವನ್ನು ಮಾಡಲಾಗದ ಸ್ಥಿತಿ ತಲೆದೂರಿದೆ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಕೃಷಿಕರಿಗೆ ನ್ಯಾಯ ಒದಗಿಸಲಾಗುವುದು. ಕೃಷಿಕರಿಗಾದ ನಷ್ಟವನ್ನು ಭರಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

[quote font_size=”16″ bgcolor=”#ffffff” arrow=”yes” align=”right”]ಬೈಂದೂರು ಭಾಗದಲ್ಲಿ ರಸ್ತೆ ಕಾಮಗಾರಿ ನಡೆಸುವ ಐಆರ್‌ಬಿ ಕಂಪೆನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅವಾಂತರಗಳು ಸೃಷ್ಠಿಯಾಗಿದೆ. ಮೂರು ಕಡೆಗಳಲ್ಲಿ ನೀರು ಹೋಗುವ ತೋಡುಗಳನ್ನು ಮುಚ್ಚಿ ಒಂದೇ ಬದಿಯಲ್ಲಿ ಹರಿಯುವಂತೆ ಮಾಡಿದ್ದರಿಂದ ಕೃತಕ ನೆರೆ ಸೃಷ್ಟಿಯಾಗಿದ್ದಲ್ಲದೇ, ಒತ್ತಿನಣೆಯ ಜೇಡಿಮಣ್ಣು ಕೊಚ್ಚಿಕೊಂಡು ಹೋಗಿ ಕೃಷಿ ಗದ್ದೆಗಳಿಗೆ ತುಂಬಿಕೊಂಡಿದೆ. ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಶಾಸಕರು ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. – ಎಸ್. ರಾಜು ಪೂಜಾರಿ, ಸದಸ್ಯರು ಜಿಲ್ಲಾ ಕೆಡಿಪಿ ಸಮಿತಿ.[/quote]

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಯಡ್ತರೆ ಹಾಗೂ ಬೈಂದೂರು ಪರಿಸರದ ಕೃಷಿ ಭೂಮಿ ಹಾಗೂ ಗ್ರಾಪಂ ರಸ್ತೆಯ ಇಕ್ಕೆಲಗಳಲ್ಲಿ ಹೂಳು ತುಂಬಿ ಕೃಷಿ ಕಾರ್ಯ ಹಾಗೂ ಸಂಚಾರಕ್ಕೆ ತೊಡಕುಂಟಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬಳಿಕ ಮಾತನಾಡಿದರು.

ಹೆದ್ದಾರಿಯ ಸಮಸ್ಯೆಯ ಬಗ್ಗೆ ಮಳೆಗಾಲ ಆರಂಭವಾಗುವ ಮುನ್ನವೇ ಕಿರಿಮಂಜೇಶ್ವರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ಮುನ್ನಚ್ಚರಿಕೆ ವಹಿಸುವಂತೆ ತಿಳಿಸಲಾಗಿತ್ತು. ಆದಾಗ್ಯ ರಸ್ತೆ ಬದಿಯ ತೋಡುಗಳನ್ನು ದುರಸ್ತಿಗೊಳಿಸದೇ ನೀರು ರಸ್ತೆಯ ಮೇಲೆಯೇ ಬ್ಲಾಕ್ ಆಗುವಂತಾಯಿತು. ಯಡ್ತರೆ, ಬೈಂದೂರು ಗ್ರಾಪಂ ವ್ಯಾಪ್ತಿಯಲ್ಲಿ ಒತ್ತಿನಣೆಯ ಗುಡ್ಡ ಕೊರೆದ ಮಣ್ಣನ್ನು ರಸ್ತೆ ಬದಿಯಲ್ಲಿ ರಾಶಿ ಹಾಕಿದ್ದರಿಂದ ಜೇಡಿ ಮಣ್ಣು ನೇರವಾಗಿ ಕೃಷಿ ಭೂಮಿಗಳಿಗೆ ಹರಿದು ಬಂದಿದ್ದು ಕೃಷಿಕರು ಅಪಾರ ನಷ್ಟ ಅನುಭವಿಸುವಂತಾಯಿತು ಎಂದರು. ಸರಾಗವಾಗಿ ನೀರು ಹೋಗುವ ಮೋರಿ ಹೂಳು ತುಂಬಿ ಬ್ಲಾಕ್ ಆದದ್ದರಿಂದ ಕೃತಕ ನೆರೆ ಸೃಷ್ಠಿಯಾಗುವಂತಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಪಂ ಸದಸ್ಯ ಜಗದೀಶ್ ದೇವಾಡಿಗ, ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ, ಪಡುವರಿ ಗ್ರಾಪಂ ಸದಸ್ಯ ವೆಂಕಟರಮಣ, ತಹಶೀಲ್ದಾರ್ ಕಿರಣ್ ಗೌರಯ್ಯ, ಕೆಪಿಸಿಸಿ ಸದಸ್ಯ ರಘುರಾಮ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಗೋಕುಲ್ ಶೆಟ್ಟಿ, ಹೆದ್ದಾರಿ ಪ್ರಾಧಿಕಾರದ ಇಂಜಿನೀಯರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version