Kundapra.com ಕುಂದಾಪ್ರ ಡಾಟ್ ಕಾಂ

ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ: ಉಚಿತ ಪುಸ್ತಕ, ಗುರುತು ಪತ್ರ ವಿತರಣೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುವೆಂಪು ಶತಮಾನೋತ್ಸವ ಮಾದರಿ ಶಾಲೆ, ತೆಕ್ಕಟ್ಟೆ. ಇತ್ತೀಚೆಗೆ ಇಲ್ಲಿ ದತ್ತಿನಿಧಿ ಬಡ್ಡಿಯಿಂದ ಎಲ್ಲಾ ಮಕ್ಕಳಿಗೆ ಉಚಿತ ಬರೆವಣಿಗೆ ಪುಸ್ತಕ ಹಾಗೂ ಧಾನಿಗಳ ಸಹಾಯದಿಂದ ಎಲ್ಲಾ ವಿಧ್ಯಾರ್ಥಿಗಳಿಗೆ ಗುರುತು ಪತ್ರವಿರುವ ಕೊರಳಪಟ್ಟಿಯನ್ನು ವಿತರಿಸುವ ಸಮಾರಂಭ ನಡೆಯಿತು. ಮಕ್ಕಳ ಶೈಕ್ಷಣಿಕ ಅವಶ್ಯಕತೆಗಳನ್ನು ಗಮನಿಸಿಕೊಂಡು ಬರವಣಿಗೆ ಪುಸ್ತಕ ವಿತರಿಸುವ ಕಾರ್ಯ ಶ್ಲಾಘನೀಯವಾದುದು. ಈ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಮೊತ್ತ ಮೊದಲ ಬಾರಿಗೆ ಜೈ ಭಾರತ್ ಸಂಸ್ಥೆಯಿಂದ ಗುರುತುಪತ್ರವಿರುವ ಕೊರಳಪಟ್ಟಿ ನೀಡುತಿರುವುದು ಪ್ರಶಂಸನೀಯಾದುದು. ದತ್ತಿನಿಧಿಗೆ ಸಹಕರಿಸಿದ ದಾನಿಗಳು ಹಾಗೂ ಗುರುತುಪತ್ರಕ್ಕೆ ನೆರವು ನೀಡಿದ ಜೈ ಭಾರತ್ ಸಂಸ್ಥೆಯ ಶ್ಲಾಘನೀಯ ಕಾರ್ಯವನ್ನು ಶಿಕ್ಷಣತಜ್ಞ ಕೆ.ವಿ.ನಾಯಕ್ ಕೊಂಡಾಡಿದರು. ತೆಕ್ಕಟ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಶೇಖರ್ ಕಾಂಚನ್ ಉಚಿತ ಬರವಣಿಗೆ ಪುಸ್ತಕ ವಿತರಿಸಿ ಮಾತನಾಡಿದರು. ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿರವರು ಗುರುತು ಪತ್ರ ವಿತರಿಸಿ; ಜೈ ಭಾರತ್ ಸಂಸ್ಥೆಯ ಕಾರ್ಯ ಇತರರಿಗೆ ಮಾದರಿ ಎಂದು ಹೇಳಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಂಜೀವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ. ಸದಸ್ಯರಾದ ಸುದೀಂದ್ರ ಗಾಣಿಗ, ಸುಮತಿ ಆಚಾರ್, ವಸಂತಿ, ಗುಲಾಬಿ, ಪೌಝಿಯಾ, ಸುಜಾತ, ಸುವರ್ಣ, ವಸಂತ ಶೆಟ್ಟಿ, ವಸಂತಿ ಹಾಗೂ ದಾನಿಗಳಾದ ಮಂಜುನಾಥ್ ರಾವ್, ನಿತ್ಯಾನಂದ ಗಾಣಿಗ, ಚಂದ್ರ ದೇವಾಡಿಗ ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದರು.

ಶಿಕ್ಷಕಿ ಶ್ರೀಮತಿ ಶರ್ಮಿಳಾ ಜಿ. ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸುರೇಂದ್ರ ಅಡಿಗ ಪ್ರಾಸ್ತಾವಿಕ ಭಾಷಣ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸದಾರಾಮ ಶೆಟ್ಟಿ ದಾನಿಗಳ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿಯರಾದ ಶ್ರೀಮತಿ ಶೋಭಾ ಹೆಗಡೆ, ಶ್ರೀಮತಿ ವೈಶಾಲಿ ಫಲಾನುಭವಿಗಳ ಹೆಸರು ವಾಚಿಸಿದರು. ಶಿಕ್ಷಕ ವಕ್ವಾಡಿ ವೇಣುಗೋಪಾಲ್ ಹೆಗ್ಡೆ ವಂದಿಸಿದರು. ಈ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾವತಿ ನಿರೂಪಿಸಿದರು.

Exit mobile version