Kundapra.com ಕುಂದಾಪ್ರ ಡಾಟ್ ಕಾಂ

ಎಸ್.ವಿ ಕಾಲೇಜಿನಲ್ಲಿ ವಿಜ್ಞಾನ ಪ್ರೋತ್ಸಾಹ ಧನ ವಿತರಣೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಸಮಾಜದ ವಿವಿಧ ಸ್ತರಗಳ ಬಗೆಗೆ ನಮ್ಮಲ್ಲಿ ಎಚ್ಚರ ಇರಬೇಕು. ಜೊತೆಗೆ ಸಮಾಜದ ಅಗತ್ಯ ವರ್ಗದ ಅಗತ್ಯತೆಗಳಿಗೆ ಸ್ಪಂದಿಸುವ ಸಹೃದಯೀ ಗುಣವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಅಭಿಪ್ರಾಯಪಟ್ಟರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂದಲ್ಲಿ ೨೦೧೫-೧೬ನೇ ಸಾಲಿನ ದ್ವಿತೀಯ ಪಿಯುಸಿಯ ವಿಜ್ಞಾನದ ಎರಡು ವಿಭಾಗಗಳಲ್ಲಿನ ಅಗ್ರಸ್ಥಾನಿಗಳಿಗೆ ತಮ್ಮ ವತಿಯಿಂದ ತಲಾ ೨೫೦೦೦ ರೂಪಾಯಿಗಳ ನಗದು ಪ್ರೋತ್ಸಾಹ ಧನವನ್ನು ವಿತರಿಸಿ ಮಾತನಾಡಿದರು.

ಪಠ್ಯ ಕಲಿಕೆಯ ಜೊತೆ ಬದುಕನ್ನು ಸಾಗಿಸಲು ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಆಗ ಮಾತ್ರ ನಿಜವಾದ ಬದುಕಿನ ಸಂತೋಷವನ್ನು ಅನುಭವಿಸಲು ಸಾಧ್ಯ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಕವಿತಾ ಎಮ್ ಸಿ ವಹಿಸಿದ್ದರು. ಜಿ.ಎಸ್ ವಿ.ಎಸ್ ಅಸೋಷಿಯೇಷನ್ನಿನ ಅಧ್ಯಕ್ಷ ಡಾ. ಕಾಶೀನಾಥ ಪೈ ಶುಭ ಹಾರೈಸಿದರು.ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಡಾ. ಉಮೇಶ್ ಪುತ್ರನ್ ಮತ್ತು ಸುಮಾ ಪುತ್ರನ್ ಅವರನ್ನು ಕಾಲೇಜಿನ ಆಡಳಿತ ಮಂಡಳಿ ಜಿ.ಎಸ್ ವಿ.ಎಸ್ ಅಸೋಷಿಯೇಷನ್ನಿನ ವತಿಯಿಂದ ಸನ್ಮಾನಿಸಲಾಯಿತು. ಪಿ.ಸಿ.ಎಮ್.ಬಿ ವಿಭಾಗದಲ್ಲಿ ಅಖಿಲೇಶ್ ಖಾರ್ವಿ ಮತ್ತು ಪಿ.ಸಿ.ಎಮ್.ಸಿ ವಿಭಾಗದಲ್ಲಿ ದೀಕ್ಷಿತ್ ಎಸ್ ಪ್ರೋತ್ಸಾಹ ಧನವನ್ನು ಪಡೆದುಕೊಂಡರು.

ಶ್ರೀಮತಿ ಸುಮಾ ಪುತ್ರನ್ ಮತ್ತು ಹಿರಿಯ ಉಪನ್ಯಾಸಕ ಆರ್ ಎನ್ ರೇವಣ್‌ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಧನ್ಯಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಹಂಝಾ ಅತಿಥಿಗಳನ್ನು ಪರಿಚಯಿಸಿದರು. ನಿವೇದಿತಾ ,ದಿಶಾ ಮತ್ತು ಅನುಷಾ ಪ್ರಾರ್ಥಿಸಿದರು.ಶುರಾ ಎಮ್ ಹೆಚ್ ಕಾರ‍್ಯಕ್ರಮ ನಿರೂಪಿಸಿದರು. ವರುಣ್ ವಿ ದೇವಾಡಿಗ ವಂದಿಸಿದರು.

ವರದಿ : ನರೇಂದ್ರ ಎಸ್ ಗಂಗೊಳ್ಳಿ.

Exit mobile version