ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬರೆಯುವ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ. ಅದರಲ್ಲೂ ಸರಾಗವಾಗಿ ಓದಿಸಿಕೊಂಡು ಹೋಗುವ ಬರವಣಿಗೆ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ. ಆದರೆ ಒಳ್ಳೆಯ ಪುಸ್ತಕ ಓದುವ ಹವ್ಯಾಸ ಯಾರು ಬೇಕಾದರೂ ರೂಢಿಸಿಕೊಳ್ಳಬಹುದು ಎಂದು ಭಂಡಾರ್‌ಕಾರ‍್ಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಹಯವದನ ಮೂಡುಸಗ್ರಿ ಹೇಳಿದರು.
ಜನಪ್ರತಿನಿಧಿ ವಾರ ಪತ್ರಿಕೆ ಆಶ್ರಯದಲ್ಲಿ ನಡೆದ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಬರೆದ ಲೇಖನಗಳ ಸಂಕಲನ ‘ಸಮಕ್ಷಮ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ, ಗಂಗಾಧರ ಐತಾಳ್, ಪ್ರವೀಣ ವಿ.ಜಿ. ಉಪಸ್ಥಿತರಿದ್ದರು. ವರದರಾಜ್ ಸ್ವಾಗತಿಸಿ, ನಾಗರಾಜ್ ವಂಡ್ಸೆ ವಂದಿಸಿದರು.