Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ರೈತಮಿತ್ರ ಯೋಜನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅನ್ನದಾತ ರೈತ ತಾಯಿಯ ಸಮಾನವಾಗಿದ್ದು, ರೈತರನ್ನು ಗೌರವಿಸಿ, ಬೆಂಬಲಿಸಿ ಸಹಾಯ ಮಾಡುವುದರ ಮೂಲಕ ರೋಟರಿ ಜಿಲ್ಲಾ ರೈತಮಿತ್ರ ಯೋಜನೆ ಯಶಸ್ವಿಯೊಳಿಸೋಣ ಎಂದು ರೋಟರಿ ಸನ್‌ರೈಸ್ ಸ್ಥಾಪಕಾಧ್ಯಕ್ಷ ದಿನಕರ ಆರ್. ಶೆಟ್ಟಿ ಹೇಳಿದರು.

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ರೈತಮಿತ್ರ ಕಾರ್ಯಕ್ರಮದ ಅಂಗವಾಗಿ ರೈತರಾದ ಕೋಟಿ ಪೂಜಾರಿ ಮತ್ತು ನಾರಾಯಣ ಆಚಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು. ರೋಟರಿ ಸನ್‌ರೈಸ್ ಅಧ್ಯಕ್ಷ ಕೆ. ನರಸಿಂಹ ಹೊಳ್ಳ ಕ್ಲಬ್ ಪರವಾಗಿ ಉಚಿತ ಗೊಬ್ಬರ ರೈತರಿಗೆ ಹಂಚಿದರು.

ರೈತರೊಂದಿಗೆ ಸಂವಾದದಲ್ಲಿ ಮತ್ತು ಕೃಷಿ ಕಾರ್ಯದಲ್ಲಿ ರೋಟರಿ ಸದಸ್ಯರು ಪಾಲ್ಗೊಂಡರು. ರೋಟರಿ ಸನ್‌ರೈಸ್ ನಿಕಟ ಪೂರ್ವಾಧ್ಯಕ್ಷ ದಿನಕರ ಪಟೇಲ್, ಸದಸ್ಯರಾದ ಕೆ.ಹೆಚ್. ಚಂದ್ರಶೇಖರ್, ರಾಜಶೇಖರ್ ಹೆಗ್ಡೆ, ಬಿ.ಎಂ. ಚಂದ್ರಶೇಖರ್, ಗಜಾನನ ಭಟ್, ರಾಮಕೃಷ್ಣ ಐತಾಳ್, ಉಲ್ಲಾಸ್, ಸುಬ್ಬರಾವ್, ಶಿವಾನಂದ, ದಿನೇಶ್ ಗೋಡೆ, ಸದಾನಂದ ಉಡುಪ, ರಾಜು ಪೂಜಾರಿ, ಮಂಜುನಾಥ ಕೆ.ಎಸ್., ಡುಂಡಿರಾಜ್, ಕಾರ್ಯದರ್ಶಿ ನಾಗೇಶ್ ನಾವಡ ಉಪಸ್ಥಿತರಿದ್ದರು.

Exit mobile version