Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್‌ನ ನಾಲ್ಕನೇ ವರ್ಷದ ಟ್ರಸ್ಟ್ ದಿನಾಚರಣೆ

ನೆರವು ನೀಡುವ ಕೈಗಳು ಹೆಚ್ಚಾಗಲಿ. ನೆರವು ಪಡೆದವರು ಸ್ವಾವಲಂಭಿಗಳಾಗಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಮಕ್ಷತ್ರಿಯ ಸಮುದಾಯದ ಏಳಿಗೆಗೋಸ್ಕರ ಸಮಾನ ಮನಸ್ಕರು ಒಟ್ಟಾಗಿ ಸ್ವಾರ್ಥರಹಿತವಾಗಿ ಶ್ರಮಿಸುತ್ತಿದ್ದು, ರಾಮಕ್ಷತ್ರಿಯ ಸಮುದಾಯದವರು ಇದರ ನೆರವು ಪಡೆದುಕೊಳ್ಳುವುದಲ್ಲದೇ ಸ್ವಾವಲಂಭಿಗಳಾಗುವತ್ತ ಆಲೋಚಿಸಬೇಕಾಗಿದೆ ಎಂದು ಮಾಜಿ ಶಾಸಕ, ವಿಶ್ವ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಹೇಳಿದರು.  ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಬೈಂದೂರು ಇದರ ನಾಲ್ಕನೇ ವರ್ಷದ ಟ್ರಸ್ಟ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಮುಂಬೈನ ಉದ್ಯಮಿ ಗಣಪತಿ ಬಿ. ಗಂಗೊಳ್ಳಿ ಮಾತನಾಡಿ ರಾಮಕ್ಷತ್ರಿಯ ಸಮುದಾಯದಲ್ಲಿ ನೆರವು ನೀಡಲು ಶಕ್ತರಾಗಿರುವ ನೂರಾರು ಮಂದಿಯಿದ್ದು ಅವರೇ ಸ್ವಪ್ರೇರಣೆಯಿಂದ ಸಮುದಾಯದ ಅಶಕ್ತರಿಗೆ ನೆರವಾಗಲು ಮುಂದೆ ಬರುವ ಔದಾರ್ಯ ತೋರಬೇಕಿದೆ. ಇದು ನಮ್ಮೊಳಗಿನ ಮನೋಶ್ರಿಮಂತಿಕೆನ್ನೂ ಹೆಚ್ಚುತ್ತದೆ ಎಂದರು.

ಬೆಂಗಳೂರಿನ ಉದ್ಯಮಿ ಜಿ. ಶಶಿಕಾಂತ ಮಾತನಾಡಿ ಮಾನವ ದುಡಿದು ಗಳಿಸಿದ್ದನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಿದರೇ ದುಡಿಮೆಗೂ ಒಂದು ಅರ್ಥ ಬರುತ್ತದೆ ಮಾತ್ರವಲ್ಲ ದುಡಿದ ಒಂದು ಪಾಲು ಸತ್ಕಾರ್ಯಕ್ಕೆ ವಿನಿಯೋಗಿಸಿದ ತೃಪ್ತಿಯೂ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಧನಸಹಾಯ ವಿತರಿಸಲಾಯಿತು. ವನಮಹೋತ್ಸವ ಹಾಗೂ ಗಿಡ ವಿತರಣೆ ಇದೇ ಸಂದರ್ಭದಲ್ಲಿ ಜರುಗಿತು. ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಬಿ. ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಉದ್ಯಮಿ ಕೆ. ಚಂದ್ರಶೇಖರ್, ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ ಪಿ., ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಬಿ. ಗೋಪಾಲ ನಾಯಕ್ ಅತಿಥಿಗಳಾಗಿದ್ದರು.

ಟ್ರಸ್ಟಿಗಳಾದ ಕೆ.ಜಿ. ನಾಗಪ್ಪ ಶೇರುಗಾರ್, ಅಶೋಕ ಕುಮಾರ್ ಬಾಡ, ಬಿ. ಶ್ರೀಧರ್, ಶ್ರೀನಿವಾಸ ಜಿ., ಜಯಂತಿ ನಾರಾಯಣ ರಾವ್, ಶಂಕರ ಆರ್. ಮದ್ದೋಡಿ, ಅಕ್ಕಿಅಂಗಡಿ ಶ್ರೀನಿವಾಸ ಮಾಸ್ತರ್, ಎನ್. ವಿಶ್ವೇಶ್ವರ, ಗೋಪಾಲಕೃಷ್ಣ ಕಲ್ಮಕ್ಕಿ, ವೆಂಕಟೇಶ ಕೆ.ಟಿ ಮೊದಲಾದವರು ಉಪಸ್ಥಿತರಿದ್ದರು.

ರಾಮಕ್ಷತ್ರಿಯ ಮಾತೃ ಮಂಡಳಿಯ ಸದಸ್ಯರು ಪ್ರಾರ್ಥಿಸಿದರು. ಟ್ರಸ್ಟಿ ಬಿ. ಶ್ರೀನಿವಾಸ ಶೇರುಗಾರ್ ಪ್ರಸ್ತಾವನೆಗೈದರು. ಟ್ರಸ್ಟ್‌ನ ಸಂಚಾಲಕ ಆನಂದ ಮದ್ದೋಡಿ ವರದಿ ವಾಚಿಸಿದರು. ಟ್ರಸ್ಟಿ ಬಿ. ವೆಂಕಟರಮಣ ಕಳುಹಿತ್ಲು ಸ್ವಾಗತಿಸಿದರು. ಟ್ರಸ್ಟಿ ಜಯಾನಂದ ಹೋಬಳಿದಾರ್ ಧನ್ಯವಾದಗೈದರು. ಸಂಚಾಲಕ ಬಿ. ಕೇಶವ ನಾಯ್ಕ್ ನಿರೂಪಿಸಿದರು.

Exit mobile version