Kundapra.com ಕುಂದಾಪ್ರ ಡಾಟ್ ಕಾಂ

ಶಾಲಾ ವ್ಯಾನ್ ದುರಂತದಲ್ಲಿ ಮಡಿದ ಮಕ್ಕಳ ಕುಟುಂಬಕ್ಕೆ ಆರ್ಥಕ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತ್ರಾಸಿ ಮೋವಾಡಿ ಕ್ರಾಸ್ ಬಳಿ ಶಾಲಾ ಮಕ್ಕಳ ಓಮ್ನಿ ಹಾಗೂ ಬಸ್ ನಡುವೆ ನಡೆದ ಭೀಕರ ಅಫಘಾತದಲ್ಲಿ ಮೃತಪಟ್ಟ ಡಾನ್ ಬಾಸ್ಕೊ ಶಾಲೆಯ ಎಂಟು ಮಕ್ಕಳ ಪೈಕಿ ಆರು ಮಕ್ಕಳ ಪೋಷಕರಿಗೆ ಶಿಕ್ಷಕ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಮಂಜೂರಾದ ಪರಿಹಾರದ ಚೆಕ್ ವಿತರಿಸಲಾಯಿತು. ಬೈಂದೂರು ಶಾಸಕ ಗೋಪಾಲ ಪೂಜಾರಿ ಘಟನೆಯ ಬಗೆಗೆ ವಿಷಾದ ವ್ಯಕ್ತಪಡಿಸಿ ಮೃತರಾದ ಮಕ್ಕಳ ಪೈಕಿ ಯುಕೆಜಿಯಲ್ಲಿ ಓದುತ್ತಿದ್ದ ಈರ್ವ ಮಕ್ಕಳ ಪೋಷಕರಿಗೂ ಪರಿಹಾರ ದೊರೆಯುವಂತೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕಟ್‌ಬೆಲ್ತೂರು ಗ್ರಾಪಂ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Exit mobile version