ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಉಡುಪಿ ಜಿಲ್ಲೆಯ ಖಡಕ್ ಅಧಿಕಾರಿ ಎಂದೆನಿಸಿಕೊಂಡು ತನ್ನ ಕಾರ್ಯವೈಖರಿಯ ಮೂಲಕ ಸಂಚಲನ ಮೂಡಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಚಿಕ್ಕಮಂಗಳೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ಗದಗದ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರು ಉಡುಪಿಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಎಸ್ಪಿ ಅಣ್ಣಾಮಲೈ ಅವರ ವರ್ಗಾವಣೆಯ ಬಗೆಗಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದ್ದು ಅಂತಿಮವಾಗಿ ಅವರು ಚಿಕ್ಕಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
ಪೊಲೀಸ್ ಇಲಾಖೆಯನ್ನು ಸಮಾಜಸ್ನೇಹಿಯಾಗಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಎಸ್ಪಿ ಅಣ್ಣಾಮಲೈ ಅವರು ಸುರಕ್ಷಾ ಮೊಬೈಲ್ ಆಪ್, ಅಪಘಾತ ತಡೆಗೆ ವಿಶೇಷ ಕ್ರಮ, ಸುರಕ್ಷಾ ಅಭಿಯಾನ, ಜನರ ಅಹವಾಲು ಸ್ವೀಕರಿಸಲು ವಿಶೇಷ ಮುತುವರ್ಜಿ ಮುಂತಾದವುಗಳ ಮೂಲಕ ಇಲಾಖೆ ಹಾಗೂ ಜನರೊಂದಿಗೆ ನೇರ ಸಂಪರ್ಕ ಬೆಸೆಯುವಲ್ಲಿ ಶ್ರಮಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.
ತನ್ನ ಕಾರ್ಯವೈಕರಿಯ ಮೂಲಕ ಉಡುಪಿ ಜಿಲ್ಲೆ ಜನಸಾಮಾನ್ಯರ ಮನಗೆದ್ದಿದ್ದ ಈ ಪೊಲೀಸ್ ಅಧಿಕಾರಿ ಯುವಜನರ ಪಾಲಿನ ಐಕಾನ್ ಎಂದೆನಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದಷ್ಟೇ ವರ್ಗಾವಣೆಯ ಗಾಸಿಪ್ ಹರಡಿದ್ದಾಗ ಜಿಲ್ಲೆಯ ಜನತೆ ಪ್ರತಿಭಟನೆಗೆ ನಿಂತಿದ್ದರು. ಆದರೆ ಆ ಸಮಯದಲ್ಲಿ ವರ್ಗಾವಣೆಯ ವಿಷಯ ಅಲ್ಲಿಗೆ ತಣ್ಣಗಾಗಿತ್ತು/ ಕುಂದಾಪ್ರ ಡಾಟ್ ಕಾಂ ವರದಿ/