ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆ ಮೇ ತಿಂಗಳಿನಲ್ಲಿ ನಡೆಸಿದ್ದ ಅಂತಿಮ ಸಿಎ ಪರೀಕ್ಷೆಯಲ್ಲಿ ಮರವಂತೆಯ ಪಟೇಲರ ಮನೆಯ ಶೈಲೇಶ್ ಶ್ರೀಧರ್ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಬೆಂಗಳೂರಿನ ಎಚ್‌ಸಿಜಿ ಎಂಟರ್‌ಪ್ರೈಸಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು. ಶೈಲೇಶ್ ಕೆನರಾ ಬ್ಯಾಂಕ್‌ನ ನಿವೃತ್ತ ಉಪ ಮಹಾಪ್ರಬಂಧಕ ಎಂ. ಶ್ರೀಧರ್ ಮತ್ತು ಬ್ಯಾಂಕ್ ಆಫ್ ಇಂಡಿಯದ ಅಧಿಕಾರಿ ಶ್ರೀಮತಿ ದಂಪತಿಯ ಪುತ್ರ.