Kundapra.com ಕುಂದಾಪ್ರ ಡಾಟ್ ಕಾಂ

ಕಿನ್ನರ ಪ್ರಕಾಶನ: ವರ್ಗಾವಣೆಗೊಂಡ ಉಡುಪಿ ಎಸ್ಪಿ ಅಣ್ಣಾಮಲೈ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕಿನ್ನರ ಪ್ರಕಾಶನ ಮಣಿಪಾಲ ಹಾಗೂ ಕೊಂಕಣಿ ಸಂಸಾರ ಪ್ರತಿಷ್ಠಾನದ ವತಿಯಿಂದ ಚಿಕ್ಕಮಂಗಳೂರು ಜಿಲ್ಲೆಗೆ ವರ್ಗಾವಣೆಗೊಂಡ ಜಿಲ್ಲೆಯ ಎಸ್ಪಿ ಕೆ. ಅಣ್ಣಾಮಲೈ ಅವರನ್ನು ಬನ್ನಂಜೆಯ ಎಸ್ಪಿ ಕಛೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಉಡುಪಿಗೆ ಎಸ್ಪಿ ಕಛೇರಿಗೆ ಆಗಮಿಸಿದ್ದ ಪಶ್ಚಿಮ ವಲಯ ನೂತನ ಐಜಿ ಅರುಣ್ ಚಕ್ರವರ್ತಿ ಅವರನ್ನು ಉಡುಪಿಯ ನಾಗರೀಕರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪಾಡಿ, ಸಮಾಜ ಸೇವಕ ಉಡುಪಿ ವಿಶ್ವನಾಥ ಶೆಣೈ, ಲೇಖಕಿ ಶಾರದಾ ಭಟ್, ಹಿರಿಯ ಪತ್ರಕರ್ತ ಶೇಖರ ಅಜೆಕಾರು, ಕಿನ್ನರ ಪ್ರಕಾಶನದ ಅಧ್ಯಕ್ಷ ಡಾ. ನಾಗೇಶ್ ಕುಮಾರ್ ಜಿ. ರಾವ್, ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

 

Exit mobile version