ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಅಂಬಾಗಿಲಿನಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟ ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿ ಉಪ್ಪುಂದದ ರಾಘವೇಂದ್ರ ಶೆಟ್ಟಿ ಅವರಿಗೆ ಸಂತಾಪ ಸೂಚಕ ಸಭೆ ಉಪ್ಪುಂದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಜರುಗಿತು.
ಮಹಾಈಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ನವೀಂದ್ರಚಂದ್ರ ಉಪ್ಪುಂದ, ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ವಿರೇಂದ್ರ ಶೆಟ್ಟಿ, ವಿದ್ಯಾರ್ಥಿ ದರ್ಶನ್ ಶೇಟ್ ಮೊದಲಾದವರು ವೇದಿಕೆಯಲ್ಲಿದ್ದರು. ಬೈಂದೂರು ಉಪ್ಪುಂದದಿಂದ ವಿವಿಧ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಆಯೋಜಿಸಿದ ಸಭೆಯಲ್ಲಿ ನಾಗರಿಕರೂ ಭಾಗವಹಿಸಿ ಮೃತ ರಾಘವೇಂದ್ರ ಶೆಟ್ಟಿ ಅವರ ಪೋಟೋಗೆ ಪುಷ್ಪಾರ್ಪಣೆ ಮಾಡಿದರು.
Read this
► ಉಪ್ಪುಂದಲ್ಲಿ ಬಸ್ಸುಗಳ ನಡುವೆ ಅಪಘಾತ. ಓರ್ವ ವಿದ್ಯಾರ್ಥಿ ದಾರುಣ ಸಾವು – http://kundapraa.com/?p=16035
► ಉಪ್ಪುಂದದಲ್ಲಿ ವಿದ್ಯಾರ್ಥಿ ಸಾವು: 2 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ – http://kundapraa.com/?p=16049
► ಭಟ್ಕಳ ಕುಂದಾಪುರ ಹೆಚ್ಚುವರಿ ಬಸ್ ಬಿಡಿ. ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಿಕರಿಗೆ ವಿದ್ಯಾರ್ಥಿಗಳಿಂದ ಮನವಿ – http://kundapraa.com/?p=16129