Site icon Kundapra.com ಕುಂದಾಪ್ರ ಡಾಟ್ ಕಾಂ

ಗ್ರೂಪ್ ಜಿಎಸ್‌ಬಿ ಹೆಲ್ಪ್‌ಲೈನ್ ಚಾರೀಟೇಬಲ್ ಟ್ರಸ್ಟ್‌ನಿಂದ ಧನ ಸಹಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರೂಪ್ ಜಿಎಸ್‌ಬಿ ಹೆಲ್ಪ್‌ಲೈನ್ ಚಾರೀಟೇಬಲ್ ಟ್ರಸ್ಟ್ ವತಿಯಿಂದ ಹೆಚ್.ಐ.ವಿ ಬಾದಿತ ಬಡಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡಲಾಯಿತು. ಶ್ರೀಮತಿ ಕವಿತಾ ಶ್ಯಾನುಬಾಣ್ ರವರು ತಮ್ಮ ತಂದೆಯ ಸ್ಮರಣಾರ್ಥ ನೀಡಿದ ಬ್ಯಾಗ್‌ಗಳನ್ನು ಮಕ್ಕಳಿಗೆ ವಿತರಿಸಲಾಯಿತು.

ಟ್ರಸ್ಟಿಗಳಲ್ಲೊರ್ವರಾದ ಜಯಶ್ರೀ ಭಟ್ ಧನ ಸಹಾಯ ಹಸ್ತಾಂತರಿಸಿದರು. ಜಿಲ್ಲೆಯ ಹೆಚ್.ಐ.ವಿ ಸೋಂಕಿತ ಪರ ಹೋರಾಟಗಾರ ಸಂಜೀವ ವಂಡ್ಸೆಯವರು ಉಪಸ್ಥಿತರಿದ್ದರು.

ವರದಿ : ರಕ್ಷಿತ ಕುಮಾರ

Exit mobile version