ಬಸ್ರೂರು: ಬಸ್ರೂರು ಒಂದು ಐತಿಹಾಸಿಕ ನಗರವಾಗಿದೆ. ಈ ಪ್ರಾಚೀನ ನಗರಕ್ಕೆ ಸುದೀರ್ಘ ಇತಿಹಾಸವಿದೆ. ಇದೊಂದು ರೇವು ಪಟ್ಟಣವೂ ಆಗಿತ್ತು. ರಾಜಧಾನಿಯೂ ಆಗಿತ್ತು. ಏಳು ಕೆರೆ ಹಾಗೂ ಏಳು ಕೇರಿಗಳ ಈ ಐತಿಹಾಸಿಕ ನಗರದ ಹಿರಿಮೆಗೆ ಪ್ರತಿ ವರ್ಷ ನಡೆಯುವ ರಥೋತ್ಸವ ಸಾಕ್ಷಿಯಾಗಿದೆ. ಇಲ್ಲಿ ರಥೋತ್ಸವದ ಸಂದರ್ಭ ನಡೆಯುವ ಸ್ನೇಹ ಸಮ್ಮಿಲನ ವಾರ್ಷಿಕೋತ್ಸವ ಅಷ್ಟೇ ಮಹತ್ವ ಪಡೆಯುತ್ತದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರಿನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಬಸ್ರೂರು ರಥೋತ್ಸವದ ಪ್ರಯುಕ್ತ ನಡೆದ ಸ್ನೇಹ ಸಮ್ಮಿಲನದ ವಾರ್ಷಿಕೋತ್ಸವ ಸಮಾರಂಭದ ಅಧ್ಯ ಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿ.ಪಂ. ಉಪಾಧ್ಯಕ್ಷ ಪ್ರಕಾಶ್ ಮೆಂಡನ್ ಅವರನ್ನು ಅಪ್ಪಣ್ಣ ಹೆಗ್ಡೆ ಸಮ್ಮಾನಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ, ಗ್ರಾ.ಪಂ. ಅಧ್ಯಕ್ಷೆ ಸುಮತಿ ಎಸ್. ಮೆಂಡನ್, ಹರೀಶ್ ಪಡಿ ಯಾರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ನೇಹ ಸಮ್ಮಿಲನದ ಅಧ್ಯಕ್ಷ ಅಶೋಕ್ ಅವರು ವಂದಿಸಿದರು.