ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ 2014ನೇ ಸಾಲಿನ ಪ್ರಶಸ್ತಿಗಳು ಪ್ರಕಟಗೊಂಡಿದ್ದು ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. 34 ಪತ್ರಕರ್ತರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ಜೀವಮಾನದ ಸಾಧನೆಗಾಗಿ ಒಬ್ಬರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಪ್ರಸ್ತಿಗೆ ಆಯ್ಕೆಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತದೆ. 2014ನೇ ಸಾಲಿಗೆ ಕೋಲಾರ ಮೂಲದವರಾದ ಹಿರಿಯ ಪತ್ರಕರ್ತರಾದ ಶ್ರೀ ಎಂ.ಎಸ್. ಪ್ರಭಾಕರ ಅವರು ಸುಮಾರು 30 ವರ್ಷದಿಂದ ` ದಿ ಹಿಂದು’ ಪತ್ರಿಕೆಯ ದಕ್ಷಿಣ ಆಫ್ರಿಕಾದ ವಿಶೇಷ ಪ್ರತಿನಿಧಿಯಾಗಿ ಹಾಗೂ ಅಸ್ಸಾಂ ರಾಜ್ಯದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಾಮರೂಪಿ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದಾರೆ. ಅವರನ್ನು ವಾರ್ಷಿಕವಾಗಿ ನೀಡಲಾಗುವ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2014ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ, ‘ಸಾಮಾಜಿಕ ಸಮಸ್ಯೆ’ ಲೇಖನಕ್ಕೆ ನೀಡುವ ‘ಅಭಿಮಾನಿ ಪ್ರಶಸ್ತಿ’, ‘ಮಾನವೀಯ ಸಮಸ್ಯೆ’ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಜೊತೆಗೆ ತಲಾ 10 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೂಲ ಸೌಲಭ್ಯ ಅಭಿವೃದ್ಧಿ, ಹಜ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್. ರೋಷನ್ ಬೇಗ್, ಸಾರಿಗೆ ಮತ್ತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ, ವಿರೋದ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯರಾದ ಎಚ್.ಎಂ. ರೇವಣ್ಣ ,ಗೋವಿಂದರಾಜು ಹಾಗೂ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ. ನಾಗಾಂಬಿಕಾ ದೇವಿ ಹಾಗೂ ಇತರೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು 2015 ಏಪ್ರಿಲ್ 16 ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅಕಾಡೆಮಿಯ ಕಾರ್ಯದರ್ಶಿ ಎಸ್. ಶಂಕರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ:
2014ನೇ ಸಾಲಿನ ವಿಶೇಷ ಪ್ರಶಸ್ತಿ – ಶ್ರೀ ಎಂ.ಎಸ್. ಪ್ರಭಾಕರ್ (ಕಾಮರೂಪಿ)- (ಕೋಲಾರ)
2014ನೇ ಸಾಲಿನ ವಾರ್ಷಿಕ ಪ್ರಶಸ್ತಿ
1. ಶ್ರೀ ಕೋಟಿಗಾನಹಳ್ಳಿ ರಾಮಯ್ಯ – (ಕೋಲಾರ)
2. ಶ್ರೀ ಎಂ.ಕೆ. ಭಾಸ್ಕರರಾವ್ – (ಶಿವಮೊಗ್ಗ)
3. ಶ್ರೀ ಎಂ. ನಾಗರಾಜ – (ಮೈಸೂರು)
4. ಶ್ರೀ ಕೆ.ಬಿ. ರಾಮಪ್ಪ – (ಶಿವಮೊಗ್ಗ)
5. ಶ್ರೀ ಬಿ. ಹೊನ್ನಪ್ಪ ಭಾವಿಕೇರಿ – (ಅಂಕೋಲ-ಉ.ಕ)
6. ಶ್ರೀಮತಿ ಗಾಯತ್ರಿ ನಿವಾಸ್ – (ಮಂಗಳೂರು)
7. ಶ್ರೀಮತಿ ಲೀಲಾವತಿ – (ಹಾಸನ)
8. ಶ್ರೀ ಲಿಂಗೇನಹಳ್ಳಿ ಸುರೇಶ್ಚಂದ್ರ – (ಬೆಂಗಳೂರು)
9. ಶ್ರೀ ಇಫ್ತಿಕಾರ್ ಅಹಮದ್ ಶರೀಫ್ – (ಬೆಂಗಳೂರು)
10. ಶ್ರೀ ವೀರೇಂದ್ರ ಶೀಲವಂತ – (ಬಾಗಲಕೋಟೆ)
11. ಶ್ರೀ ರಿಜ್ವಾನ್ ಉಲ್ಲಾ ಖಾನ್ – (ಬೆಂಗಳೂರು)
12. ಶ್ರೀ ಬಿ.ಎಸ್. ಪ್ರಭುರಾಜನ್ – (ಮೈಸೂರು)
13. ಶ್ರೀ ಎಸ್. ನಾಗೇಂದ್ರ (ನೇತ್ರರಾಜು) – (ಮೈಸೂರು)
14. ಶ್ರೀ ದೇವೇಂದ್ರಪ್ಪ ಹೆಚ್. ಕಪನೂರಕರ್ – (ಕಲಬುರ್ಗಿ)
15. ಶ್ರೀ ಬಿ.ವಿ. ಗೋಪಿನಾಥ್ – (ಕೋಲಾರ)
16. ಶ್ರೀ ರೋನ್ಸ್ ಬಂಟ್ವಾಳ್ – (ಮುಂಬೈ) – ಹೊರನಾಡ ಕನ್ನಡಿಗರು
17. ಶ್ರೀ ಗಂಧರ್ವ ಸೇನಾ – (ಬೀದರ್)
18. ಶ್ರೀ ಶಿವಕುಮಾರ ಅಡಿವೆಪ್ಪ ಭೋಜಶೆಟ್ಟರ – (ಧಾರವಾಡ)
19. ಶ್ರೀ ಶಿವಾನಂದ ತಗಡೂರು – (ಹಾಸನ)
20. ಶ್ರೀ ವಿ. ನಂಜುಂಡಪ್ಪ – (ಬೆಂಗಳೂರು)
21. ಶ್ರೀ ಎಚ್.ಟಿ. ಅನಿಲ್ – (ಕೊಡಗು)
22. ಶ್ರೀ ಆಸ್ಟ್ರೋಮೋಹನ್ – (ಉಡುಪಿ)
23. ಶ್ರೀ ಬಸವರಾಜ ಹೊಂಗಲ್ – (ಧಾರವಾಡ)
24. ಶ್ರೀ ಸಿ.ಎನ್. ರಾಜು (ಮಣ್ಣೆರಾಜು) – (ತುಮಕೂರು)
25. ಶ್ರೀಮತಿ ನಾಗಲಕ್ಷ್ಮೀ ಬಾಯಿ – (ದಾವಣಗೆರೆ)
26. ಶ್ರೀ ವಿನಾಯಕ ಗಂಗೊಳ್ಳಿ – (ಉಡುಪಿ)
27. ಶ್ರೀ ಎನ್. ರವಿಕುಮಾರ್ – (ಶಿವಮೊಗ್ಗ)
28. ಶ್ರೀ ವಿಲಾಸ್ ಮೇಲಗಿರಿ – (ಹಾವೇರಿ)
29. ಶ್ರೀ ಮಂಜುನಾಥ ಎಂ. ಅದ್ದೆ – (ಬೆಂಗಳೂರು)
30. ಶ್ರೀ ಲೈಕ್ ಎ. ಖಾನ್ – (ಮೈಸೂರು)
31. ಶ್ರೀಮತಿ ರಕ್ಷಾ ಕಟ್ಟೆಬೆಳಗುಳಿ – (ಹಾಸನ)
32. ಶ್ರೀ ಎಸ್. ಲಕ್ಷ್ಮೀನಾರಾಯಣ – (ಕೋಲಾರ)
33. ಶ್ರೀ ಸಾಹುಕಾರ್ ಚಂದ್ರಶೇಖರ್ ರಾವ್ (ಸಾಚ) – (ಚಿಕ್ಕಮಗಳೂರು)
34. ಶ್ರೀ ಬಂಗ್ಲೆ ಮಲ್ಲಿಕಾಜರ್ುನ – (ಬಳ್ಳಾರಿ)
‘ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ’
2014ನೇ ಸಾಲಿನ ಆಂದೋಲನ ಪ್ರಶಸ್ತಿ : ರಾಯಚೂರು ವಾಣಿ ಪತ್ರಿಕೆ, ರಾಯಚೂರು
‘ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ’
2014 ನೇ ಸಾಲಿನ ಅಭಿಮಾನಿ ಪ್ರಶಸ್ತಿ : ಶ್ರೀ ಸಿದ್ಧಲಿಂಗಸ್ವಾಮಿ-ವಿಜಯ ಕರ್ನಾಟಕ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ
ಶೀರ್ಷಿಕೆ : ಕುಣಿಗಲ್ ತಾಲ್ಲೂಕು ಗೊಲ್ಲರ ಹಟ್ಟಿಯ ಮಹಿಳೆಯರಿಗೆ ಹೆರಿಗೆ, ಋತುಸ್ರಾವ ಎಂದರೆ ಶಿಕ್ಷೆ
‘ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ’
2014ನೇ ಸಾಲಿನ ಮೈಸೂರು ದಿಗಂತ ಪ್ರಶಸ್ತಿ : ಶ್ರೀಧರ, ಮಂಗಳೂರು- ಲೋಕಧ್ವನಿ ದಿನಪತ್ರಿಕೆ, ಶಿರಸಿ, (ಉತ್ತರಕನ್ನಡ)
ಶೀರ್ಷಿಕೆ : ತನುವ ತೆಯ್ದು ಸುಗಂಧ ಹಂಚುವ ಕರ್ಮಪಥಿಕ