Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಹೆದ್ದಾರಿ ಸಮಸ್ಯೆ: ಶಾಸಕರಿಂದ ಆಲಿಕೆ

ಬೈಂದೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ವಿವಿಧೆಡೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂಬ ದೂರುಗಳಿದ್ದು, ಅಧಿಕಾರಿಗಳು ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಇವುಗಳಿಗೆ ಪರಿಹಾರ ರೂಪಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆದ್ದಾರಿ ಪ್ರಾಧಿ ಕಾರದ ಯೋಜನಾ ಪ್ರಬಂಧಕ ಕೆ. ಎಂ. ಹೆಗ್ಡೆ, ಗುತ್ತಿಗೆದಾರ ಕಂಪೆನಿಯ ಯೋಗೇಂದ್ರಪ್ಪ ಮತ್ತು ಸುರೇಶ ಪಾಟೀಲ್‌ ಜತೆ ಅವರು ಶುಕ್ರವಾರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜನಪ್ರತಿನಿಧಿಗಳು ಮತ್ತು ಜನರೊಂದಿಗೆ ಚರ್ಚಿಸಿದ ಬಳಿಕ ಕೆಲವು ಸೂಚನೆಗಳನ್ನಿತ್ತರು.

ಮರವಂತೆಯಲ್ಲಿ ಮೀನುಗಾರಿಕಾ ಬಂದರು ಪ್ರದೇಶದಿಂದ ವಾಹನಗಳು ಹೆದ್ದಾರಿ ಪ್ರವೇಶಿಸಲು ಅವಕಾಶ ಇರಬೇಕು. ನಾವುಂದದಲ್ಲಿ ಬಡಾಕೆರೆ ಜಂಕ್ಷನ್‌ ಬಳಿ ಅಂಡರ್‌ ಪಾಸ್‌ ಮತ್ತು ಸರ್ವೀಸ್‌ ರೋಡ್‌ ನಿರ್ಮಿಸಬೇಕು, ತ್ರಾಸಿ, ಅರೆಹೊಳೆ ಕ್ರಾಸ್‌, ಯಡ್ತರೆ ಕ್ರಾಸ್‌ನಲ್ಲಿ ಜಂಕ್ಷನ್‌ ರಚಿಸಬೇಕು. ಬೈಂದೂರಿನಲ್ಲಿ ಫ್ಲೈ ಓವರ್‌ ನಿರ್ಮಿ ಸಬೇಕು ಎಂದು ಸಾರ್ವಜನಿಕರು ನೀಡಿದ ಸಲಹೆಗಳನ್ನು ಕಾರ್ಯಗತಗೊಳಿಸ ಬೇಕೆಂದು ಸೂಚಿಸಿದರು.

ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್‌. ಜನಾರ್ದನ, ನಾವುಂದ ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷ ಕರುಣಾಕರ ಶಟ್ಟಿ, ಸದಸ್ಯ ನರಸಿಂಹ ದೇವಾಡಿಗ, ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ ನಾಗರಾಜ್‌, ಮಾಜಿ ತಾಪಂ ಸದಸ್ಯ ಸದಾಶಿವ ಡಿ. ಪಡುವರಿ, ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ತಮ್ಮೂರಿನ ಸಮಸ್ಯೆಗಳನ್ನು ಮುಂದಿಟ್ಟರು. ತಾಪಂ ಸದಸ್ಯ ಎಸ್‌. ರಾಜು ಪೂಜಾರಿ ಚರ್ಚೆ ಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.

ವಿಸ್ತರಣೆ ವೇಳೆ ಹಾಳಾದ ಗ್ರಾಮ ಪಂಚಾಯತ್‌ ನೀರು ಪೂರೈಕೆ ವ್ಯವಸ್ಥೆ ಯನ್ನು ಸುಗಮಗೊಳಿಸುವ, ಚರಂಡಿ ನಿರ್ಮಾಣವಾಗುವವರೆಗೆ ಸೃಷ್ಟಿಯಾ ಗುವ ಸಮಸ್ಯೆಗಳನ್ನು ಯಂತ್ರಗಳ ಮೂಲಕ ನಿವಾರಿಸುವ ಭರವಸೆ ಅಧಿಕಾರಿ ಗಳು ನೀಡಿದರು.

Exit mobile version