Site icon Kundapra.com ಕುಂದಾಪ್ರ ಡಾಟ್ ಕಾಂ

ಬಸವರಾಜ್‌ ಶೆಟ್ಟಿಗಾರ್‌ರಿಗೆ ಧ್ವಜಪುರ ರತ್ನ ಬಿರುದು ಪ್ರದಾನ

ಕೋಟೇಶ್ವರ: ಇಲ್ಲಿನ ಸ್ವಾಗತ್‌ ಫ್ರೆಂಡ್ಸ್‌ನ ವಿಂಶತಿ ಉತ್ಸವದಲ್ಲಿ ವಾಸ್ತುತಜ್ಞ, ಪ್ರಸಂಗಕರ್ತ ಬಸವರಾಜ್‌ ಶೆಟ್ಟಿಗಾರರಿಗೆ 200ನೇ ಸನ್ಮಾನದ ಪ್ರಯುಕ್ತ ಕೀರ್ತಿ ಕಲಶ ಎನ್ನುವ ಅಭಿನಂದನಾ ಗ್ರಂಥ ಅರ್ಪಿಸಿ, ಧ್ವಜಪುರ ರತ್ನ ಬಿರುದು ನೀಡಿ ಸಮ್ಮಾನಿಸಿ, ಗೌರವಿಸಲಾಯಿತು.

ಸಮಾರಂಭವನ್ನು ನ್ಯಾಯವಾದಿ ಎ.ಎಸ್‌.ಎನ್‌.ಹೆಬ್ಟಾರ್‌ ಅವರು ಉದ್ಘಾಟಿಸಿ ಶುಭಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೋಟೇಶ್ವರ ಗ್ರಾಮ ಪಂಚಾಯತ್‌ ಅಧ್ಯಕ್ಷ ರಾಜಶೇಖರ ಶೆಟ್ಟಿಯ ವಹಿಸಿದ್ದರು.

ಕುಂದಾಪುರ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಕುಂದಾಪುರ ಪೊಲೀಸ್‌ ವೃತ್ತ ನಿರೀಕ್ಷಕ ದಿವಾಕರ್‌, ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾವ್ಯಶ್ರೀ ಬಿ. ಶೆಟ್ಟಿಗಾರ್‌ ಅವರನ್ನು ಮುತ್ತೈದೆಯರು ಭಾಗೀನ ನೀಡಿ ಹರಸಿದರು. ಕ್ರೀಡಾಪಟು ದಿವ್ಯಜ್ಯೋತಿ, ಕಲ್ಕುಡ ದೇವಸ್ಥಾನದ ಮತಿವಂತ ಕಾಮತ್‌ ಅವರನ್ನು ಗೌರವಿಸಲಾಯಿತು.

ಸ್ವಾಗತ್‌ಫ್ರೆಂಡ್ಸ್‌ನ ಸುರೇಶ್‌ ಗೊಲ್ಲ ಸ್ವಾಗತಿಸಿದರು. ಅಧ್ಯಕ್ಷ ಸೋಮಶೇಖರ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಗೊಲ್ಲ ವಂದಿಸಿದರು.

Exit mobile version