Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ, ಬೈಂದೂರಿನಲ್ಲಿ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ನಾವೇ ಅಭಿವೃದ್ಧಿಯ ರುವಾರಿಗಳಾಗೋಣ: ಧ್ವಜಾರೋಹಣ ನೆರವೇರಿಸಿ ಎಸಿ ಅಶ್ವಥಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ ಬೈಂದೂರು: ನಾಗರಿಕ ಸಮಾಜ ಎಲ್ಲದಕ್ಕೂ ಸರಕಾರವನ್ನು ಅವಲಂಭಿಸದೇ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ಸೇವಾ ಮನೋಭಾವದಿಂದ ತೊಡಗಿಸಿಕೊಂಡಾಗ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್. ಹೇಳಿದರು.

ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ಪುರಸಭೆ ಹಾಗೂ ರಾಷ್ಟ್ರೀಯು ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಸೋಮವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ 70ನೇ ಸ್ವತಂತ್ರ್ಯೋತ್ಸವ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ನೆಲ, ಜಲ ಭಾಷೆ ಭಾವನಾತ್ಮಕ ಬೆಸುಗೆಯಿಂದ ಮೂಲಭೂತ ಸೌಕರ್ಯ, ಕೃಷಿ, ವಿಜ್ಞಾನ, ತಂತ್ರಜ್ಞಾನ ಮುಂತಾದ ಕ್ಷೇತ್ರದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು ವಿಶ್ವವೇ ಭಾರತದತ್ತ ಮುಖಮಾಡಿದೆ ಎಂದರು. ಕರ್ನಾಟಕ ರಾಜ್ಯ ಸರಕಾರ ಕೂಡಾ ರಾಜ್ಯದ ಜನರ ಕಲ್ಯಾಣಕ್ಕಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿ, ಸಕಾಲ ಮುಂತಾದ ಹಲವು ಕಲ್ಯಾಣ ಯೋಜನೆ ನೀಡಿದೆ. ಗ್ರಾಮಮಟ್ಟದಲ್ಲಿ ಬಾಪೂಜೆ ಕೇಂದ್ರದ ಮೂಲಕ ಗ್ರಾಮೀಣ ಜನರ ಅಲೆದಾಟ ತಪ್ಪಿಸಿದೆ ಎಂದು ಹೇಳಿದರು.

ಕುಂದಾಪುರ ತಾಪಂ ಅಧ್ಯಕ್ಷ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಕುಂದಾಪುರ ಡಿಎಸ್ಪಿ ಪ್ರವೀಣ್ ನಾಯ್ಕ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್.ಶೆಟ್ಟಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ದಿನಕರ ಹೆಗ್ಡೆ, ಪ್ರಭಾರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಗೂ ಕುಂದಾಪುರ ಪುರಸಭೆ ಸದಸ್ಯರು ಇದ್ದರು.

ಕುಂದಾಪುರ ಠಾಣಾಧಿಕಾರಿ ನಾಸೀರ್ ಹಸೇನ್ ಮುಂದಾಳತ್ವದಲ್ಲಿ ಪೊಲೀಸ್, ಗೃಹರಕ್ಷ ದಳ, ಅಗ್ನಿಶಾಮಕ ದಳ, ಎನ್‌ಸಿಸಿ ಭೂದಳ-ನೌಕಾದಳ, ಸ್ಕೌಟ್ ಅಂಡ್ ಗೈಡ್ಸ್, ಸೇವಾದಳ, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಸಚಲನ ಜರುಗಿತು. ಅಕ್ಷರ ದಾಸೋಹ ಸಂಯೋಜಕ ಅಧಿಕಾರಿ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.

ಬೈಂದೂರು: 70ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೈಂದೂರಿನ ವಿವಿಧೆಡೆಗಳಲ್ಲಿ ಧ್ವಜಾರೋಹಣ ನೆರವೇರಿತು. ಬೈಂದೂರಿನ ಡಿಗ್ರಿ ಕಾಲೇಜು ಜ್ಯೂನಿಯರ್ ಕಾಲೇಜು, ರತ್ತೂಬಾಯಿ ಜನತಾ ಹೈಸ್ಕೂಲ್, ಶಾಸಕರ ಕಛೇರಿ ಹಾಗೂ ಇನ್ನಿತರ ಕಛೇರಿಗಳಲ್ಲಿ ಧ್ವಜಾರೋಹಣ ಜರುಗಿತು. ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ ಮೊದಲಾದವರು ಬೈಂದೂರಿನಲ್ಲಿ ವಿವಿಧೆಡೆ ಧ್ವಜಾರೋಹಣ ನೆರವೇರಿಸಿದರು.

ಬೈಂದೂರು

Exit mobile version