Kundapra.com ಕುಂದಾಪ್ರ ಡಾಟ್ ಕಾಂ

6ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಆಹ್ವಾನ

ಕುಂದಾಪುರ: ಕಾರ್ಕಳದ ಎಣ್ಣೆಹೊಳೆ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಳದ ವಠಾರದಲ್ಲಿ ನಡೆಯಲಿರುವ ೬ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಸಿದ್ಧ ವಾಗ್ಮಿ, ಸಾಹಿತಿ ಎ ಎಸ್ ಎನ್ ಹೆಬ್ಬಾರ್ ಅವರಿಗೆ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಮಿತಿಯು ಅವರ ನಿವಾಸ ’ನುಡಿ’ಯಲ್ಲಿ ಆಮಂತ್ರಣ ನೀಡಿ ಆಹ್ವಾನಿಸಿತು.

ಸಂಘಟಕರುಗಳ ಪರವಾಗಿ ಆಹ್ವಾನ ನೀಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಪರಿಕಲ್ಪನೆಯೇ ವಿಶಷ್ಠವಾಗಿದೆ. ಅಂತಹ ವೈಶಿಷ್ಟ್ಯಪೂರ್ಣ ಸಮ್ಮೇಳನದ ಅಧ್ಯಕ್ಷರನ್ನಾಗಿ ಎ.ಎಸ್.ಎನ್.ಹೆಬ್ಬಾರ್ ಆಯ್ಕೆ ಮಾಡಿರುವುದು ಅತ್ಯಂತ ಸ್ತುತ್ಯರ್ಹವಾಗಿದೆ. ಹೆಬ್ಬಾರ್ ಕನ್ನಡಕ್ಕೆ ಸಾಕಷ್ಟು ಕೆಲಸ ಮಾಡಿ, ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ.ಎಚ್.ವಿ.ನರಸಿಂಹ ಮೂರ್ತಿ, ಗಡಾದ ರಾಮಕೃಷ್ಣ ರಾವ್, ದೇವಿದಾಸ ಕಾಮತ್, ವಸಂತ ರಾವ್, ಕಿಶೋರ್ ಕುಮಾರ್ ಕೆಂಚನೂರು, ಕೆ.ಪಿ.ಭಟ್, ಯು.ಎಸ್. ಶೆಣೈ, ರೋಟರಿಯ ಮನೋಜ್ ನಾಯರ್, ಸೀತಾರಾಮ ಶೆಟ್ಟಿ, ಯಾಕೂಬ್ ಖಾದರ್ ಗುಲ್ವಾಡಿ, ಭಾಸ್ಕರ ಹೆಬ್ಬಾರ್, ಹೆಚ್.ಎಸ್. ಹತ್ವಾರ್, ಸಂತೋಷ್ ಕುಮಾರ್ ಶೆಟ್ಟಿ, ಶ್ರೀವತ್ಸ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.
ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಕಾರ್ಯಕ್ರಮ ನಿರ್ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸುನಿಲ್ ಎಚ್. ಜಿ. ಬೈಂದೂರು ಸ್ವಾಗತಿಸಿದರು. ಪ್ರಕಾಶ್ ಪಡಿಯಾರ್ ಮರವಂತೆ ವಂದಿಸಿದರು.

Exit mobile version