Kundapra.com ಕುಂದಾಪ್ರ ಡಾಟ್ ಕಾಂ

ದೇಶದ ಅಖಂಡತೆಗೆ ಧಕ್ಕೆ ತರುವುದನ್ನು ಸಹಿಸಲಾಗದು: ಸಂಸದೆ ಶೋಭಾ ಕರಂದ್ಲಾಜೆ

ಕುಂದಾಪುರದಲ್ಲಿ ತಿರಂಗ ಯಾತ್ರೆ ಬೈಕ್ ರ‍್ಯಾಲಿ ಸಮಾರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಅಖಂಡತೆಗೆ ಧಕ್ಕೆ ತರುವ ಯಾವ ಕೆಲಸವನ್ನು ಸಹಿಸಲಾಗದು. ರಾಷ್ಟ್ರ ಉಳಿದರೆ ಮಾತ್ರ ನಾವು, ನೀವು ಸಂಸ್ಕೃತಿ ಉಳಿವು ಸಾಧ್ಯವಿದೆ. ದೇಶದಲ್ಲಿದ್ದುಕೊಂಡೇ ದೇಶವಿರೋಧಿ ಘೋಷಣೆಗಳನ್ನು ಕೂಗುವವರನ್ನು ಹಾಗೂ ರಾಷ್ಟ್ರವಿರೋಧ ಕೃತ್ಯದಲ್ಲಿ ಭಾಗಿಯಾಗುವವರಿಗೆ ಬೆಂಬಲ ನೀಡುವುದನ್ನು ಖಂಡಿಸಬೇಕಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕುಂದಾಪುರ ಬಿಜೆಪಿ ಆಶ್ರಯದಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ನಡೆದ ತಿರಂಗ ಯಾತ್ರೆ ಬೈಕ್ ರ‍್ಯಾಲಿ ಸಮಾರೋಪದಲ್ಲಿ ಅವರು ಮಾತನಾಡಿ, ದೇಶ ಕಾಯುವ ವೀರ ಯೋಧರ ಹಾಗೂ ದೇಶದ ವಿರುದ್ಧವೇ ಘೋಷಣೆ ಕೂಗುವುದನ್ನು ಎಂದಿಗೂ ಸಹಿಸಲಾಗದು. ಬೆಂಗಳೂರಿನಲ್ಲಿ ದೇಶದ ವಿರುದ್ಧ ಘೋಷಣೆ ಕೂಗಿದವರ ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ದೇಶದಲ್ಲಿ ಭಯೋತ್ಪಾದನೆ, ನಕ್ಸಲ್ ವಾದ, ಮಾಪಿಯಾ ಅಫಿಮು, ಸಂಸ್ಕೃತಿ ಹೆಚ್ಚುತ್ತಿದ್ದು, ಅದರ ವಿರುದ್ಧ ಯುವ ಜನಾಂಗ ಜಾಗೃತಿ ಮೂಡಿಸಬೇಕು. ಅಖಂಡ ಭಾರತ ಹಿರಿಯರ ಕನಸಾಗಿದ್ದು, ಅದನ್ನು ಸಾಕಾರ ಗೊಳಿಲು ಪಣತೊಡಬೇಕಾಗಿದೆ. ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ಅವರ ತ್ಯಾಗದ ಪರಿಚಯ ಹಳ್ಳಿಹಳ್ಳಿಗೂ ಮುಟ್ಟಿಸುವ ಜೊತೆ ಯುವಜನರಲ್ಲಿ ತಿರಂಗ ಮಹತ್ವ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತಿರಂಗ ಯಾತ್ರೆ ಹಮ್ಮಿಕೊಳ್ಳುವಂತೆ ದೇಶದ ಜನತೆಗೆ ಕರೆನೀಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಕಾರ‍್ಯಕಾರಿಣಿ ಸದಸ್ಯ ತಿಂಗಳೆ ವಿಕ್ರಮಾರ್ಜುನ ಹೆಗ್ಗೆಡೆ, ಕಿರಣ್ ಕೊಡ್ಗಿ, ರಾಜ್ಯ ಕಾರ‍್ಯದರ್ಶಿ ಶ್ಯಾಮಲಾ ಕುಂದರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಬಿಜೆಪಿ ಹಿಂದುಳಿದ ವರ್ಗ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಸಂಧ್ಯಾ ರಮೇಶ್, ಕುತ್ಯಾರು ನವೀನ್ ಶೆಟ್ಟಿ, ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಕಾಶ್ ಮೆಂಡನ್, ಮಹೇಶ್ ಪೂಜಾರಿ, ಸತೀಶ್ ಪೂಜಾರಿ, ಇದ್ದರು.

ಕುಂದಾಪುರ ವಲಯ ಬಿಜೆಪಿ ಪ್ರಧಾನ ಕಾರ‍್ಯದರ್ಶಿ ಶಂಕರ ಅಂಕದಕಟ್ಟೆ ವಂದೆ ಮಾತರಂ ಹಾಡಿದರು. ಕುಂದಾಪುರ ಬಿಜೆಪಿ ಉಪಾಧ್ಯಕ್ಷ ಭಾಸ್ಕರ ಬಿಲ್ಲವ ನಿರೂಪಿಸಿದರು. ಬೈಕ್ ರ‍್ಯಾಲಿ ಹಾಲಾಡಿ ಮೂಲಕ ಹೊರಟು, ಬಿದ್ಕಲ್ಕಟ್ಟೆ, ಸಾಬ್ರಕಟ್ಟೆ, ಕೋಟ, ತೆಕ್ಕಟೆ ಕೋಟೇಶ್ವರ ಹಾಗೂ ಅಂಕದಕಟ್ಟೆ ಮೂಲಕ ಬೈಕ್ ರ‍್ಯಾಲಿ ಕುಂದಾಪುರದಲ್ಲಿ ಸಮಾಪನಗೊಂಡಿತು/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version