Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಗ್ರಿಗೋಲ್ಡ್ ಕಣ್ಣು ಮುಚ್ಚಾಲೆ-ಏಜಂಟರು, ಠೇವಣಿದಾರರ ಸಂಕಟ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಠೇವಣಿ ನೀಡಿದವರಿಗೆ ಆತಂಕ, ಠೇವಣಿ ಇಟ್ಟ ಏಜಂಟರಿಗೆ ಸಂಕಟ. ಮೂರಂಕಿಯಿಂದ ಹಿಡಿದು ಆರಂಕಿಯನ್ನು ಮೀರಿದ ಠೇವಣಿಗಳು ಕುಂದಾಪುರ ಶಾಖೆಯೊಂದರಲ್ಲಿಯೇ ಸಂಗ್ರಹವಾಗಿತ್ತು. ಸಾವಿರಾರು ಮಂದಿ ವ್ಯವಹಾರ ನಡೆಸುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣತೊಡಗಿಸಿ ಅದರಿಂದ ಬರುವ ಲಾಭವನ್ನು ಹೆಚ್ಚಿನ ಬಡ್ಡಿಯೊಂದಿಗೆ ಠೇವಣಿದಾರರಿಗೆ ನೀಡುತ್ತೇವೆಂಬ ಕಂಪೆನಿಯ ಆಮಿಷಕ್ಕೆ ಕಟ್ಟುಬಿದ್ದ ಜನ ಇಂದು ಮುಚ್ಚಿದ ಕಂಪೆನಿಯ ಬಾಗಿಲಿನ ಎದುರು ನಿಂತು ಹಿಡಿಶಾಪ ಹಾಕುತ್ತಿದ್ದಾರೆ. ಇಂದು ಅಗ್ರಿಗೋಲ್ಡ್ ಎಂಬ ಸಂಸ್ಥೆಯಲ್ಲಿ ಠೇವಣಿ ಇಟ್ಟವರು ಹಾಗೂ ಏಜೆಂಟರುಗಳ ಅತಂತ್ರರಾಗಿ ಹೋಗಿದ್ದಾರೆ.

ಎಂಟು ವರ್ಷಗಳ ಹಿಂದೆ ಹೆಚ್ಚಿನ ಕಮೀಷನ್ ಆಧಾರದ ಮೇಲೆ ಸ್ಥಳೀಯರೆ ಆದ ಹಲವಾರು ಏಜಂಟರುಗಳನ್ನು ನೇಮಿಸಿಕೊಂಡು ಕಛೇರಿಯ ವ್ಯವಸ್ಥಾಪಕ, ಸಿಂಬಂದಿ ಗಳನ್ನು ಹೊಂದಿದ್ದ ಅಗ್ರ್ರಿಗೋಲ್ಡ್ ಆ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿಗಳನ್ನು ದಿನಂಪ್ರತಿಯೆಂಬಂತೆ ಸಂಗ್ರಹಿಸುತ್ತಿತ್ತು. ಗೃಹ ಬಳಕೆಯ ಉತ್ಪನ್ನಗಳನ್ನು ಸಹಾ ತನ್ನ ಹೆಸರಿನ ಲೇಬಲ್ ನಲ್ಲಿ ಗ್ರಾಹಕರಿಗೆ ವಿತರಿಸುವ ಮೂಲಕವೂ ಸಾವಿರಾರು ರೂಪಾಯಿಗಳ ವ್ಯವಹಾರವನ್ನು ನಡೆಸುತಿತ್ತು. ಅಲ್ಲದೆ ಜನರಿಂದ ತಾನು ಠೇವಣಿ ಮೂಲಕ ಸಂಗ್ರಹಿಸಿದ ಹಣವನ್ನು ಮಹಾ ನಗರಗಳಲ್ಲಿ ಭೂಮಿ ಖರೀದಿಸಿ ವಿಕ್ರಯಿಸುವ ರಿಯಲ್ ಏಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿ ಅದರಿಂದ ಬರುವ ಲಾಭಾಂಶವನ್ನು ತನ್ನ ಗ್ರಾಹಕರಿಗೆ ಹಂಚುವುದಾಗಿ ಕಿವಿ ಮೇಲೆ ಹೂವಿರಿಸಿದ ಅಗ್ರಿಗೋಲ್ಡ್ ಗ್ರಾಹಕರ ವಿಶ್ವಾಸವನ್ನು ಗಳಿಸಿ ಜನರು ಸರತಿ ಸಾಲಿನಲ್ಲಿ ನಿಂತು ಕೋಟ್ಯಾಂತರ ಹಣ ಹೂಡುವಂತೆ ಮಾಡಿತ್ತು.

ಈ ನಡುವೆ ಕೆಲವು ಸಲ ಠೇವಣಿ ದಾರರು ಸಂಸ್ಥೆಯ ಬಗ್ಗೆ ಅದೆಲ್ಲಿಂದಲೋ ಅನುಮಾನಗೊಂಡು ಮುತ್ತಿಗೆ ಹಾಕಿದಾಗ, ಅವರನ್ನು ಕಛೇರಿಯ ವ್ಯವಸ್ಥಾಪನಾ ಸಿಬಂದಿಗಳು ತಮ್ಮ ಎಂದಿನ ಶೈಲಿಯಲ್ಲಿಯೇ ನಯವಾದ ಮತುಗಳಿಂದ ಸಾಗ ಹಾಕುವುದರಲ್ಲಿ ಯಶಸ್ಸಿಯಾಗುತ್ತಿದ್ದರು. ಆದರೆ ಠೇವಣಿ ಅವಧಿ ಮುಗಿದು ಮಾಸಗಳೇ ಉರುಳಿದರೂ ಃಣ ವಾಪಾಸ್ಸು ಬರದಿದ್ದಾಗ ಕೆರಳಿದ ಠೇವಣಿದಾರರು ಮುತ್ತಿಗೆ ಹಾಕಿ ಗದ್ದಲ ಎಬ್ಬಿಸಿದಾಗ ಪೋಲಿಸರನ್ನು ಕರೆಸಿದ ಕಛೇರಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಬಿಸ್ನೆಸ್ ನಲ್ಲಿ ದೇಶ ವ್ಯಾಪಿ ಕೊಂಚ ಏರು ಪೇರಾದ ಕಾರಣವನ್ನು ಮುಂದಿಟ್ಟು ಹರ ಸಾಹಸದಿಂದ ಜನರನ್ನು ಸಾಗ ಹಾಕಿತ್ತು ಮತ್ತದೇ ಕೊನೆ ಠೇವಣಿ ದಾರರು ಕಛೇರಿಗೆ ಮುತ್ತಿಗೆ ಹಾಕುವ ಪ್ರಮೇಯವೇ ಬರಲಿಲ್ಲಾ ಯಾಕೆಂದರೆ ಅದಾಗಲೇ ಕುಂದಾಪುರದ ಅಗ್ರಿಗೋಲ್ಡ್ ಕಛೇರಿಯ ಶಟರೆನ್ನುವುದು ಶಾಶ್ವತವಾಗಿ ಮುಚಿ ಬಿಟ್ಟಿರುವು ದರಿಂದ ಪಿಗ್ಮಿ ಕಟ್ಟಿದವರು, ಲಕ್ಷಾಂತರ ಠೇವಣಿ ಇರಿಸಿದವರು ದಿನಾಲು ಮುಚ್ಚಿದ ಕಚೇರಿಯೆದುರು ಬಂದು ಬಾಯಿ ಬಾಯಿ ಬಡಕೊಳ್ಳುತ್ತಿದ್ದ ಏಜಂಟರುಗಳಿಗೆ ಹಾಗೂ ಠೇವಣಿ ದಾರರಿಗೆ ಕೆಲವು ತಿಂಗಳುಗಳ ಹಿಂದೆ ಇಟ್ಟ ಠೇವಣಿ ಹಣ ಹಿಂತಿರುಗಿಸಲಾಗುವುದು ಎಂದು ಅಗ್ರಿ ಗೋಲ್ಡ್ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ ಪ್ರಕಟಣೆಯು ಮತ್ತೆ ಹಣ ಪಡೆಯುವ ಆಸೆಯನ್ನು ಚಿಗಿತು ಕೊಳ್ಳುವಂತೆ ಮಾಡಿತ್ತಾದರೂ ಈ ವರೆಗೆ ಸಂಸ್ಥೆಯ ಯಾವುದೇ ವರ್ತಮಾನವಿಲ್ಲದೆ ಹಣ ಹೂಡಿದವರು ಕಂಗಾಲಾಗಿ ಹೋಗಿದ್ದಾರೆ.

ಸಂಸ್ಥೆಯ ಹೆಚ್ಚಿನ ಕಮೀಷನ್ ಆಸೆಗೆ ಬಲಿ ಬಿದ್ದು ಅಸಂಖ್ಯಾತ ಗ್ರಾಹಕರನ್ನು ಸಂಸ್ಥೆಗೆ ಸೇರಿಸಿದ ಸ್ಥಳಿಯ ಏಜಂಟರುಗಳು ಮಾತ್ರ ದಿಕ್ಕು ತೋಚದವರಂತಾಗಿದ್ದು, ನಾವು ಕೇವಲ ಕಮೀಷನ್ ಏಜಂಟರುಗಳಾಗಿ ಮಾತ್ರ ಕೆಲಸ ಮಾಡಿದ್ದೇವೆ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನೆಲ್ಲಾ ಅಗ್ರಿಗೋಲ್ಡ್ ಒಡಲಿಗೆ ತುಂಬಿದ್ದೇವೆ ಇದೀಗ ನಾವೇನು ಮಾಡುವುದು ಎಂದು ಅಲಾಪಿಸುತ್ತಿದ್ದಾರೆ.

ಕೇವಲ ಕುಂದಾಪುರ ತಾಲೂಕಿನಲ್ಲಿಯೇ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಎಗ್ರಿಗೋಲ್ಡ್ ಕಂಪೆನಿ ನಂಬಿಕೊಂಡು ಹೊಟ್ಟೆಪಾಡಿನ ಉದ್ಯೋಗ ನಡೆಸುತ್ತಿದ್ದರೆ, ದಕ್ಷಿಣ ಭಾರತದ ಎಷ್ಟು ಲಕ್ಷ ಮಂದಿ ಸಮಸ್ಯೆಗೆ ಒಳಗಾಗಿರಬಹುದು ಎಂದು ಅಂದಾಜಿಸಬಹುದು. ಎಗ್ರಿಗೋಲ್ಡ್ ಸೇರಿದಂತೆ ಅಂತಹ 23 ಕಂಪೆನಿಗಳ ಮೇಲೆ ಕಾನೂನು ಬಾಹಿರ ವ್ಯವಹಾರಕ್ಕಾಗಿ ಆಂಧ್ರ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಕ್ರಮಕೈಗೊಳ್ಳುತ್ತಿದ್ದರೆ ಕನ್ನಡಿಗರ ಪರಿಸ್ಥಿತಿ ಕೇಳುವವರಿಲ್ಲ. ಕರ್ನಾಟಕ ಸರಕಾರದ ಮೇಲೆ ಒತ್ತಡ ಹಾಕಿ ಅಮಾಯಕ ಗ್ರಾಹಕರಿಗೆ ನ್ಯಾಯ ಒದಗಿಸಬೇಕಾಗಿದೆ.

ಕುಂದಾಪುರ ತಾಲೂಕಿನ ಅಂದಾಜು 4 ಸಾವಿರ ಏಜೆಂಟರೂ ಸೇರಿ ಲಕ್ಷಾಂತರ ಏಜೆಂಟರ 6700 ಕೋಟಿ ರೂ ಹಣ ಗ್ರಾಹಕರಿಗೆ ಮರುಪಾವತಿಸುವ ಕುರಿತು ಕಳೆದ ಎರಡು ವರ್ಷಗಳಿಂದ ಮಾದ್ಯಮಗಳಲ್ಲಿ ಏನೇನೋ ಸುದ್ಧಿಗಳು, ಸ್ಪಷ್ಟನೆಗಳು, ನ್ಯಾಯಾಲಯದ ವಿಚಾರಣೆಗಳು ಪ್ರಕಟವಾಗುತ್ತಿದ್ದರೂ ಹಣ ನೀಡಿದವರಿಗೆ ಸದ್ಯೋಭವಿಷ್ಯದಲ್ಲಿ ಮರುಪಾವತಿ ಆಗುವ ಲಕ್ಷಣಗಳು ಗೋಚರಿಸದಿರುವ ಹಿನ್ನೆಲೆಯಲ್ಲಿ ಏಜೆಂಟರು ಹಾಗೂ ಗ್ರಾಹಕರು ಕಂಗಾಲಾಗಿದ್ದಾರೆ. ಏಜೆಂಟರನ್ನು ಪುಸಲಾಯಿಸಿ ತಮ್ಮ ವ್ಯವಹಾರ ಕುದುರಿಸಿಕೊಂಡ ಸುಪರ್‌ವೈಸ್‌ರ್‌ಗಳು ವ್ಯವಸ್ಥಾಪಕರು ಈಗ ಏನೊಂದು ಪ್ರತಿಕ್ರಿಯೆ ತೋರದೆ ಸುಮ್ಮನಾಗಿ ಬಿಟ್ಟಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಹುತೇಕ ಏಜೆಂಟರೆಲ್ಲ ಅಮಾಯಕ ರಾಗಿದ್ದು ಗ್ರಾಮೀಣ ಪ್ರದೇಶದವರಾದು ದರಿಂದ ಈ ಬಗ್ಗೆ ಹೋರಾಟ ನಡೆಸುವ ರೀತಿಯೂ ಅವರಿಗೆ ತಿಳಿದಿಲ್ಲ ಹಾಗಾಗಿ ಸರಿಯಾದ ಸಂಘಟನೆಯೂ ಕರ್ನಾಟಕದಲ್ಲಿ ನಡೆದಿಲ್ಲ. ಕುಂದಾಪುರದಲ್ಲಂತೂ ಉದ್ಯೋಗ ಕಳೆದುಕೊಂಡು ಕಣ್ಣೀರು ಹಾಕುವ ಗ್ರಾಹಕರ ಮನಸ್ಥಿತಿ ಖೇದಕರವಾಗಿದೆ. ಎಷ್ಟೋ ಮಂದಿ ಖಿನ್ನರಾಗಿ ಹೋಗಿದ್ದಾರೆ.

23 ಕಂಪೆನಿಗಳ ಮೇಲೆ ಕ್ರಮ :
ಆಂಧ್ರಪ್ರದೇಶ ಸರಕಾರ ಎಗ್ರಿಗೋಲ್ಡ್, ಸಿರಿಗೋಲ್ಡ್, ಅಭಯ ಗೋಲ್ಡ್, ಎನ್ ಮಾರ್ಟ್, ಪಿಎಸಿ,ಎಲ್, ಶ್ರೀ ವತ್ಸಲ, ಅಕ್ಷಯ ಗೋಲ್ಡ್ , ಅಕ್ಸಿತಾ ಗೋಲ್ಡ್, ಅವಮ್ ಗೋಲ್ಡ್ , ವಸಂತ ಗೋಲ್ಡ್, ಫಾರ್ ಎವರ್, ಬೊಬ್ಬರಿಲ್ಲು, ಮೈತ್ರಿ, ಎಸೈಎಂಎಸ್, ಗೋಲ್ಡ್ ಕ್ವೆಸ್ಟ್, ಆರ್.ಎಂ.ಡಿ. ಇನ್‌ಪೊಟೆಕ್, ಮಹೇಶ್ವರ ಗೆಟ್ ಇಟ್, ವಿ.ಆರ್.ಚಿಟ್ಸ್, ಸುಭಾದರ್ಶಿಚಿಟ್ಸ್, ಎಮ್‌ವೆ, ಎಚ್‌ಐಎಂ ಮುಂತಾದ ಇಪ್ಪತ್ತಮೂರು ಕಂಪೆನಿಗಳ ಮೇಲೆ ವಿಚಾರಣೆ ನಡೆಸುತ್ತಿದೆ. ದಶಕಗಳಿಂದ ಗ್ರಾಹಕರ ಸಂಪರ್ಕ ಹೊಂದಿರುವ ಈ ಕಂಪೆನಿಗಳು ನ್ಯಾಯ ಬಾಹಿರ ಕ್ರಮ ಅನುಸರಿಸಿವೆ. ದೇಶಕ್ಕೂ ನಷ್ಟ ಮೂಡಿವೆ ಎಂಬ ಆಪಾದನೆ ಎದುರಿಸುತ್ತಿವೆ.

Exit mobile version