Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಸಂತ ಮೇರಿ ಪ್ರೌಢ ಶಾಲೆಯ 1977-78ರ ದಶಕದ ಸಹಪಾಠಿಗಳ ಪುನರ್‌ಮಿಲನ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಿಸುಮಾರು ಮೂವತ್ತೇಂಟು,ಮೂವತೊಂಬತ್ತು ವರ್ಷಗಳ ಸುದೀರ್ಘ ಅವಧಿಯ ನಂತರ ಹೈಸ್ಕೂಲಿನಲ್ಲಿ ಸಹಪಾಠಿಗಳಾಗಿದ್ದವರು ಒಂದೆಡೆ ಸೇರಿದ ಅಪೂರ್ವ ಮಿಲನಕ್ಕೆ ಕುಂದಾಪುರ ಜೆಕೆ ಟವರ‍್ಸ್ ನ ಸಭಾಂಗಣವು ಸಾಕ್ಷಿಯಾಯಿತು. 1977ರ ಸಾಲಿನಲ್ಲಿ ಕುಂದಾಪುರದ ಸೈಂಟ್ ಮೇರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ ಎಸ್.ಎಸ್.ಎಲ್.ಸಿ ತನಕ ಜತೆಯಾಗಿ ವಿದ್ಯಾಭ್ಯಾಸ ಮಾಡಿದ್ದ ಸಹಪಾಠಿಗಳು ಸಾಂಕೇತಿಕವಾಗಿ ಒಗ್ಗೂಡುವ ಸಮಾರಂಭಕ್ಕೆ ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಕುಂದಾಪುರದ ರಾಜೇಂದ್ರ ಹೋಸ್ಕೋಟೆ ಮುನ್ನುಡಿ ಬರೆದರೆ, ಅದಕ್ಕೆ ಜತೆಯಾಗಿ ಚಾಲನೆ ನೀಡಿದವರು ಕುಂದಾಪುರದವರಾಗಿ ವಿದೇಶದಲ್ಲಿ ಉದ್ಯಮಿಯಾಗಿ ಬೆಳೆದು ಇದೀಗ ಮಂಗಳೂರಿನಲ್ಲಿ ನೆಲೆಸಿರುವ ವಿಲ್ಸನ್ ಡಿಸೋಜ, ಹಾಗೂ ಉಡುಪಿ ಮಹಿಳಾ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರ ಅಡಿಗ ಅವರು. ಮತ್ತೇ ಈ ಅಪರೂಪದ ಮಿಲನಕ್ಕೆ ರೂವಾರಿಯಾಗಿ ನಿಂತವರು ಕುಂದಾಪುರದ ಖ್ಯಾತ ಓರ್ಥೋಪೆಡಿಕ್ ತಜ್ಞ ಡಾ. ಶಿವಕುಮಾರ್, ಮೈಸ್ ಕಂಪ್ಯೂಟರಿನ ವಾಲ್ಟರ್ ಫೆರ್ನಾಂಡೀಸ್.

ಸಮಾರಂಭದ ಅರಂಭದಲ್ಲಿ ತಮ್ಮನ್ನು ಅಗಲಿರುವ ಸಹಪಾಠಿಗಳಿಗೆ, ಶಿಕ್ಷಕರಿಗೆ ಶೃದ್ದಾಂಜಲಿ ಅರ್ಪಿಸಿದ ಪುರಾತನ ಗೆಳೆಯರು ಅಂದಿನ ನೆನಪುಗಳೊಂದಿಗೆ, ತಾವು ಸಾಗಿದ ಹಾದಿಯ ಸಹಿತ ತಮ್ಮ ಬದುಕಿನ ಪಯಣದ ಒಂದೊಂದು ಹೆಜ್ಜೆ, ಅನುಭವಗಳನ್ನು ಯಾವುದೇ ಅಹಂ, ಭೀಡೆಗಳಿಲ್ಲದೆ ಏಳೆಏಳೆಯಾಗಿ ಬಿಡಿಸಿಟ್ಟರು,ಮಕ್ಕಳಾಗಿ ನಲಿದರು ಪರಸ್ಪರ ಕಿಚಾಯಿಸಿಕೊಂಡು ಅಂದಿನ ನೆನಪುಗಳ ಓಕುಳಿಯಾಡಿದರು ಬೆಳಿಗ್ಗೆಯಿಂದ ಇಳಿ ಸಂಜೆಯವರೆಗೂ ಜರಗಿದ ಈ ಅಂದಿನ ಗೆಳೆಯರ ಮಿಲನಕ್ಕೆ ಸಮಯವೂ ಸಹ ಸದ್ದಿಲ್ಲದೆ ಸರಿದು ಹೋಗಿತ್ತು ಸಾಮಾನ್ಯವಾಗಿ ಕಾಲೇಜಿನಲ್ಲಿ ಕಲಿತ ಸಹಪಾಠಿ ಗಳು ಹಲವು ವರ್ಷಗಳ ನಂತರ ಸಂಘಟಿತರಾಗುವುದೇ ಅತ್ಯಂತ ಕಷ್ಟದಾಯಕವಾಗಿರುವಾಗ ಅದಕ್ಕೂ ಮುನ್ನ ಪ್ರೌಢ ಶಾಲೆಯಲ್ಲಿ ಕಲಿತ ಸರಿಸುಮಾರು ೨೫ಕ್ಕೂ ಮಿಕ್ಕಿದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಒಗ್ಗೂಡಿದ್ದು ಕುಂದಾಪುರದ ಮಟ್ಟಿಗೆ ಪ್ರಥಮ ಎನ್ನಲಾಗಿದೆ. ಅದಾಗ್ಯೂ ಇದೇ ಸಹಪಾಠಿಗಳು ತಮ್ಮ ಸಂಸಾರ ಸಹಿತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮಿಲನ 22 ಸಮಾರಂಭವನ್ನು ಮುಂದಿನ ಜನವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ.

Exit mobile version