Site icon Kundapra.com ಕುಂದಾಪ್ರ ಡಾಟ್ ಕಾಂ

ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಶೇರಿಂಗ್ ಡೇ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ಕಾಡಿಯ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಪೂರ್ವಪ್ರಾಥಮಿಕ ತರಗತಿಯ ಚಿನ್ನರುಗಳು ’ಶೇರಿಂಗ್ ಡೇ’ ಆಚರಿಸಿದರು. ಮಕ್ಕಳಲ್ಲಿ ಹಂಚಿಕೊಳ್ಳುವ ಅಭ್ಯಾಸವನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿಸಬೇಕೆಂಬ ಉದ್ದೇಶದೊಂದಿದೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ತಾವು ತಂದ ತಿಂಡಿ ತಿನಿಸುಗಳುನ್ನು ಹಂಚುವುದರ ಮೂಲಕ ಸಾಂಕೇತಿಕವಾಗಿ ಆಚರಿಸಿದರು. ಇದರೊಂದಿಗೆ ಮಕ್ಕಳಿಂದ ಸಂಗ್ರಹಿಸಿದ ಪುಸ್ತಕ, ಪೆನ್ಸಿಲ್, ಮತ್ತಿತರ ಕಲಿಕ ಸಾಮಗ್ರಿಗಳನ್ನು ಬೇಳೂರಿನ ಸ್ಪೂರ್ತಿಧಾಮಕ್ಕೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಪೂರ್ವಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವಿಶಾಲ ಶೆಟ್ಟಿ, ಸಹಶಿಕ್ಷಕಿಯರಾದ ಶುಭಲಕ್ಷ್ಮಿ, ರೇಣುಕಾ ಹಾಗೂ ಮಕ್ಕಳಿಂದ ಸ್ಪೂರ್ತಿಧಾಮದ ಮುಖ್ಯಸ್ಥರಾದ, ಡಾ. ಕೇಶವ ಕೋಟೇಶ್ವರವರು ಕೊಡುಗೆಯನ್ನು ಸ್ವೀಕರಿಸಿದರು.

Exit mobile version