Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಕಛೇರಿ ಉದ್ಘಾಟನೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಳಾಂತರಿತ ಕಛೇರಿಯನ್ನು ಸೋಮವಾರ ಸಂಘದ ಅಧ್ಯಕ್ಷೆ ಶಾರದಾ ಎಸ್. ಖಾರ್ವಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿರುವ ಗೌರಿ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘದ ಮುಖ್ಯ ಕಛೇರಿಯನ್ನು ಸಹಕಾರಿಯ ಸದಸ್ಯರ ಮತ್ತು ಜನರ ಅನುಕೂಲಕ್ಕಾಗಿ ವಿಸ್ತಾರವಾದ ಪ್ರಥಮ ಮಹಡಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು.

ಪುರೋಹಿತರಾದ ಜಿ.ಅನಂತಕೃಷ್ಣ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಂಘದ ಉಪಾಧ್ಯಕ್ಷೆ ಮಾಲತಿ ಜಿ.ಖಾರ್ವಿ, ನಿರ್ದೇಶಕಿಯರಾದ ನೀಲಾವತಿ ಎಸ್.ಖಾರ್ವಿ, ಪಾರ್ವತಿ ಬಿ.ಖಾರ್ವಿ, ಶಾರದಾ ಆರ್.ಹೆಗ್ಡೆ, ದೀಪಾ ಎಸ್.ಖಾರ್ವಿ, ಶೈಲಾ ಎಂ.ಖಾರ್ವಿ, ರೇಖಾ ಜಿ.ಖಾರ್ವಿ, ಮತ್ಸ್ಯೋದ್ಯಮಿ ಶಿವಪ್ಪ ಖಾರ್ವಿ, ಸುರೇಂದ್ರ ಡಿ.ಖಾರ್ವಿ, ಕೃಷ್ಣ ಕೋಟಾನ್, ಸಹಕಾರಿಯ ಸಿಬ್ಬಂದಿಗಳು, ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಸಹಕಾರಿಯ ಕಾರ್ಯದರ್ಶಿ ಗಣಪತಿ ಖಾರ್ವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Exit mobile version