Site icon Kundapra.com ಕುಂದಾಪ್ರ ಡಾಟ್ ಕಾಂ

ಎಸ್ಪಿ ಕಛೇರಿ ಬಳಿ ಬೀದಿನಾಟಕ ಪ್ರದರ್ಶನ

ಉಡುಪಿ: ಇಲ್ಲಿನ ನೇಟಿವ್ ಸಂಸ್ಥೆಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷರ ಕಛೇರಿಯ ಬಳಿ ಶಿರ್ವದ ಸಂತ ಮೇರಿ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಅಭಿನಯಿಸಿದ ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯಗಳ ಕುರಿತಾದ “ಹೆಣ್ಣು ಜಗದ ಕಣ್ಣು” ಬೀದಿನಾಟಕ ಪ್ರದರ್ಶನ ನಡೆಯತು.

ಬೀದಿನಾಟಕವನ್ನು ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ ಅಣ್ಣಾಮಲೈ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಪೋಲಿಸ್ ಠಾಣಾಧಿಕಾರಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನೇಟಿವ್ ಸಂಸ್ಥೆಯ ನಿರ್ದೇಶಕರಾದ ಪ್ರೇಮಾನಂದ ಕಲ್ಮಾಡಿ, ಸಂತ ಮೇರಿ ಕಾಲೇಜಿನ ಉಪನ್ಯಾಸಕ ವಿಘ್ನೇಶ್‌ ಉಪಸ್ಥಿತರಿದ್ದರು.

Exit mobile version