Site icon Kundapra.com ಕುಂದಾಪ್ರ ಡಾಟ್ ಕಾಂ

ಅಂಜುಮಾನ್ ಶಬಾಬುಲ್ ಇಸ್ಲಾಂ ವೆಲ್‌ಫೇರ್ ಟ್ರಸ್ಟ್: ಉಚಿತ ರಕ್ತ ತಪಾಸಣಾ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಅಂಜುಮಾನ್ ಶಬಾಬುಲ್ ಇಸ್ಲಾಂ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಉಚಿತ ರಕ್ತ ತಪಾಸಣಾ ಶಿಬಿರ ನಡೆಯಿತು.

ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಸಯ್ಯದ್ ಅಲಿ ಕೋಯಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಕಳೆದ ೨೫ ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಇದೇ ಮೊದಲ ಬಾರಿಗೆ ಉಚಿತ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಸಭೆಯಲ್ಲಿ ಜಾಮೀಯಾ ಮಸೀದಿ ಇಮಾಮ್ ಫೈಝುಲ್ ಬಾರಿ, ಮೌಲಾನ ತಯ್ಯಬ್ ನೂರಿ, ಹಾಗೂ ಟ್ರಸ್ಟಿಗಳಾದ ಶೇಖ್ ಜಾಫರ್ ಸಾದಿಕ್, ಎಸ್. ಅಬ್ದುಲ್ ಖಾದರ್, ಮಹಮ್ಮದ್ ಸುಲ್ತಾನ್, ಹಾಗೂ ಶೇಖ್ ಫೈಸಲ್ ಹಾಜರಿದ್ದರು. ಶಿಬಿರದಲ್ಲಿ ಟ್ರಸ್ಟಿನ ಸರ್ವ ಸದಸ್ಯರು ಹಾಜರಿದ್ದು ಸುಮಾರು ೭೩ ಮಂದಿ ಸ್ತ್ರೀ, ಪುರುಷರು ಶಿಬಿರದ ಪ್ರಯೋಜನ ಪಡೆದುಕೊಂಡರು.

Exit mobile version