Kundapra.com ಕುಂದಾಪ್ರ ಡಾಟ್ ಕಾಂ

ವಿಶ್ವ ತುಳುವೆರೆ ಆಯನೋ ರಥಯಾತ್ರೆಗೆ ಮಾರಣಕಟ್ಟೆ ಕ್ಷೇತ್ರದಲ್ಲಿ ಸ್ವಾಗತ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಡಿಸೆಂಬರ್ 9 ರಿಂದ 13 ರ ತನಕ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನದ ಪ್ರಚಾರದ ಭಾಗವಾಗಿ ಬಸ್ರೂರು ತುಳುವೇಶ್ವರದಿಂದ ಕಾಸರಗೋಡು ತುಳುವನದವರೆಗೆ ಮೂರು ತಿಂಗಳುಗಳ ಕಾಲ ನಡೆಯುವ ರಥಯಾತ್ರೆಗೆ ವ್ಯೆಭವಯುತ ಸ್ವಾಗತ ನೀಡಲಾಯಿತು. ಮಾರಣಕಟ್ಟೆ ಕ್ಷೇತ್ರದ ಆನುವಂಶಿಕ ಆಡಳಿತ ಮುಕ್ತೇಸರರಾದ ಸಿ. ಸೀತಾರಾಮ ಶೆಟ್ಟಿ ಮಾತನಾಡಿ ತುಳುನಾಡಿನ ಸಂಸ್ಕ್ರತಿಯ ಸಂರಕ್ಷಣೆಗಾಗಿ ನಡೆಯುತ್ತಿರುವ ತುಳುವೆರೆ ಆಯನೋ ಯಶಸ್ವಿಯಾಗಲಿ ಎಂದು ಶುಭಹಾರಸಿದರು. ಈಸಂದಭ೯ದಲ್ಲಿ ಶ್ರೀಕ್ಷೇತ್ರದ ಅಕ್ಔಟೆಂಟ್ ಕೆ.ನಾರಾಯಣ ಶೆಟ್ಟಿ , ನಿವೖತ್ತ ಅಧ್ಯಾಪಕ ಕೆ ಶಂಕರ ಶೆಟ್ಟಿ , ದೇವಳದ ಸಿಬ್ಬಂದಿಗಳು ಉಪಸ್ತಿತರಿದ್ದರು.

Exit mobile version