Site icon Kundapra.com ಕುಂದಾಪ್ರ ಡಾಟ್ ಕಾಂ

ಹಿಸ್ ಗ್ರೇಸ್ ಮಾಂಟೆಸ್ಸರಿ ಹೌಸ್ ಆಫ್ ಚಿಲ್ಡ್ರನ್ ಕೋಡಿ: ಮರಿಯಾ ಮಾಂಟೆಸ್ಸರಿ ಜನ್ಮದಿನ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಿಸ್ ಗ್ರೇಸ್ ಮಾಂಟೆಸ್ಸರಿ ಹೌಸ್ ಆಫ್ ಚಿಲ್ಡ್ರನ್ ಕೋಡಿಯಲ್ಲಿ ಮರಿಯಾ ಮಾಂಟೆಸ್ಸರಿ ಯವರ ಜನ್ಮದಿನವನ್ನು ಆಚರಣೆ ಮಾಡಲಾಯಿತು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಬ್ಯಾರೀಸ್ ಸೀಸೈಡ್ ಪಬ್ಲಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿ’ಸೋಜರವರು ಉಪಸ್ಥಿತರಿದ್ದರು. ಮಾಂಟೆಸ್ಸರಿ ಶಿಕ್ಷಕಿ ಜೆನಿಫರ್ ಲೂಯಿಸ್ ಮರಿಯಾ ಮಾಂಟೆಸ್ಸರಿ ಯವರ ಕಿರು ಪರಿಚಯವನ್ನು ನೀಡಿದರು. ಮಾಂಟೆಸ್ಸರಿ ವಿದ್ಯಾರ್ಥಿಗಳಾದ ಮೊಹಮ್ಮದ್ ರಿಹಾನ್ ಮತ್ತು ಫಾತಿಮಾ ಸುಹಾನಾ ಸ್ವಾಗತಿಸಿದರು. ವಿದ್ಯಾರ್ಥಿನಿ ರಾಫಿದಾ ವಂದಿಸಿದರು. ಮಾಂಟೆಸ್ಸರಿ ಶಿಕ್ಷಕಿ ಗಾಯಿತ್ರಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Exit mobile version