Kundapra.com ಕುಂದಾಪ್ರ ಡಾಟ್ ಕಾಂ

ಆದಿತ್ಯ ವಿವಿಧೋದ್ದೇಶ ಸಹಕಾರ ಸಂಘ: ಶೇ.15 ಡಿವಿಡೆಂಟ್ ಘೋಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:  ಸಹಕಾರಿ ಸಂಘವು ಆರಂಭವಾಗಿ ಕೇವಲ ಮೂರು ವರ್ಷದಲ್ಲಿ 9ಕೋಟಿಗೂ ಅಧಿಕ ವಹಿವಾಟುಗಳನ್ನು ನಡೆಸಿ ಸದಸ್ಯರ, ನಿರ್ದೇಶಕರ ಸಹಕಾರದಿಂದ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ. ಆದುದರಿಂದ ಪ್ರಸಕ್ತ ಸಾಲಿನಲ್ಲಿ ಉತ್ತಮ ಆದಾಯ ಗಳಿಸಿದ ಹಿನ್ನೆಲೆಯಲ್ಲಿ ಶೇ.15 ಡಿವಿಡೆಂಟ್‌ನ್ನು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷರಾದ ರಾಜೇಂದ್ರ ಹೆಗ್ಡೆ ಹೇಳಿದರು.

ಇತ್ತಿಚಿಗೆ ಸಂಘದ ಕಛೇರಿಯಲ್ಲಿ ಜರುಗಿದ ಹಂಗಳೂರಿನ ಆದಿತ್ಯ ವಿವಿಧೋದ್ದೇಶ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಕಳೆದ ವರ್ಷದ ಆಯವ್ಯಯವನ್ನು ಮಂಡಿಸಿ 2016-17ನೇ ಸಾಲಿನ ಅಂದಾಜು ಆಯವ್ಯಯವನ್ನು ಸಭೆಯ ಗಮನಕ್ಕೆ ತರಲಾಯಿತು. ಆಡಳಿತ ಮಂಡಳಿಯ ಉಪಾಧ್ಯಕ್ಷ ವಿ. ದಿನೇಶ್ ದೇವಾಡಿಗ, ನಿರ್ದೇಶಕರಾದ ರತ್ನಾಕರ ಕೊಟೇಕಾರ್, ಸಂಜೀವ ದೇವಾಡಿಗ, ಕೃಷ್ಣ ದೇವಾಡಿಗ, ಪ್ರವೀಣಕುಮಾರ್ ಕೆ.ಬಿ., ಎ. ಜಯರಾಮ ಶೆಟ್ಟಿ, ಹರೀಶ್ ಬಿಲ್ಲವ, ಉದಯ ಮೆಂಡನ್, ಸಂತೋಷ ಕೋಣಿ, ಪ್ರಶಾಂತ ಕೊಲ್ಲೂರು, ಆಶಾ ಚಂದ್ರಶೇಖರ್, ವಿಜಯಲಕ್ಷ್ಮೀ ಗಣೇಶ್, ರವೀಂದ್ರ ಹೆಗ್ಡೆ, ಜಾರ್ಜ್ ಕರ್ವೆಲ್ಲೊ ಇನ್ನಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಉಪಾಧ್ಯಕ್ಷ ವಿ. ದಿನೇಶ್ ದೇವಾಡಿಗ ವಂದಿಸಿದರು. ಸಂಘದ ಬೆಳವಣಿಗೆಯ ವರದಿಯನ್ನು ವ್ಯವಸ್ಥಾಪಕ ನಾರಾಯಣ ಬಿಲ್ಲವ ವಾಚಿಸಿದರು.

_MG_0724 _MG_0722

Exit mobile version