Kundapra.com ಕುಂದಾಪ್ರ ಡಾಟ್ ಕಾಂ

ಕತಾರ್ ಐಸಿಸಿ ಅಧ್ಯಕ್ಷ ಗಿರೀಶ್ ಕುಮಾರ್ ಕೊಲ್ಲೂರಿಗೆ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕತಾರ್‌ನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಕೆ. ಆರ್. ಗಿರೀಶ್ ಕುಮಾರ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಗಿರೀಶ್ ಅವರ ತಾಯಿ, ಪತ್ನಿ ಇಂಧೂ ಗಿರೀಶ್, ಮಕ್ಕಳಾದ ಆದಿತ್ಯ ಕೃಷ್ಣ ಗಿರೀಶ್, ಆದರ್ಶ ಕೃಷ್ಣ ಗಿರೀಶ್ ಅವರೊಂದಿಗೆ ದೇವಳಕ್ಕೆ ಭೇಟಿ ನೀಡಿದ್ದ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಭೇಟಿಯ ಸಂದರ್ಭದಲ್ಲಿ ದೇವಳದ ಆರ್.ಎನ್.ಎಸ್ ವಸತಿಗೃಹಕ್ಕೆ ಭಕ್ತಾದಿಗಳ ಅನುಕೂಲಕ್ಕಾಗಿ ವಾಟರ್ ಪ್ಯೂರಿಪೈಯರ್ ಹಾಗೂ ಸಿಸಿ ಕ್ಯಾಮರಾಗಳನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ವಸತಿಗೃಹದ ಸಿಬ್ಬಂಧಿ ನಾಗರಾಜ ಖಾರ್ವಿ, ದೇವಳದ ಸಿಬ್ಬಂಧಿ ಸೀತಾರಾಮ, ಶಬರೀಶ್ ಮೊದಲಾದವರು ಉಪಸ್ಥಿತರಿದ್ದರು.

ಕತಾರ್‌ನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಕೆ. ಆರ್. ಗಿರೀಶ್ ಕುಮಾರ್ ವೃತ್ತಿಯಲ್ಲಿ ಇಂಜಿನಿಯರ್. ಕಳೆದ 24ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದು, 10 ವರ್ಷಗಳಿಂದ ಕತಾರ್‌ನ ಪ್ರಸಿದ್ಧ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಇದರೊಂದಿಗೆ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

Katara ICC president Girish Kumar visit to kolluru1

Exit mobile version