Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಪಬ್ಲಿಕ್ ಸ್ಕೂಲ್: ಲಿಟರರಿ ಕ್ಲಬ್ ಉದ್ಘಾಟನೆ, ತ್ರೈಮಾಸಿಕ ವಾರ್ತಾ ಪತ್ರಿಕೆ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿಯಲ್ಲಿನ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಲಿಟರರಿ ಕ್ಲಬ್ ನ ಉದ್ಘಾಟನೆ ಹಾಗೂ ವಾರ್ತಾಸಂಪದ ಲರ್ನಿಂಗ್ ಲೈವ್‌ಲಿ ಪತ್ರಿಕೆಯ ಬಿಡುಗಡೆ ಮಾಡಲಾಯಿತು.

ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಭಂಡಾರ್ಕಾಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ. ಹಯವದನ ಉಪಾದ್ಯಾ ಮಾತನಾಡಿ ಮಕ್ಕಳಲ್ಲಿ ಭಾಷಾಭಿಮಾನ ಹಾಗೂ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳುವ ಬಗೆಯನ್ನು ವಿವರಿಸಿದರು. ಕವಿ ಅಥವಾ ಸಾಹಿತಿಯಾಗಬೇಕಾದರೆ ನಾವು ಇನ್ನೊಬ್ಬರ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಅವರಂತೆ ಆಲೋಚಿಸುವ ಅನುಭವಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಪಾತ್ರಗಳನ್ನು ಸೃಷ್ಠಿಸಿ ನಾಟಕ, ಕತೆ, ಕಾದಂಬರಿಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ತಿಳಿಸಿದರು.

ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಕಾರ‍್ಯನಿರ್ವಹಣಾಧಿಕಾರಿ ಅನುಪಮ ಎಸ್ ಶೆಟ್ಟಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಶಾಯಿಜು ನಾಯರ್, ಉಪಪ್ರಾಂಶುಪಾಲೆ ಸುನಂದಾ ಪಾಟೀಲ್ ಹಾಗೂ ಶಾಲೆಯ ಶೈಕ್ಷಣಿಕ ಸಂಘಟಕರಾದ ಎಮ್.ಎನ್.ವಿ.ಪಿ ನಾಯ್ಡು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಧ್ಯಾ ಸ್ಮಿತಾರವರು ಲಿಟರರಿ ಕ್ಲಬ್ ನ ಉದ್ದೇಶ ಹಾಗೂ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡ ಕಾರ‍್ಯ ಯೋಜನೆಗಳ ಕುರಿತಾಗಿ ವರದಿಯನ್ನು ಓದಿದರು.

ವಿದ್ಯಾರ್ಥಿನಿ ಅಪೇಕ್ಷಾ ಪೈ ಸಾಹಿತ್ಯಾ ಸಂಘದ ಕುರಿತು ಭಾಷಣವನ್ನು ಮಾಡಿದರು. ಶಾಲಾ ವಿದ್ಯಾರ್ಥಿ ಮಾಸ್ಟರ್ ಪ್ರಜ್ವಲ್ ಪೀಟರ್ ಬರೆಟ್ಟೊ ಸ್ವಾಗತಿಸಿದರು. ಅಧ್ಯಾಪಕ ನಿತಿನ್ ಅಲ್ಮೇಡಾ ರವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಿದ್ಧಾರ್ಥ ಧನ್ಯವಾದ ಸಮರ್ಪಿಸಿದರು. ಬಿ.ಆರ್ ಆಯುಷ್ ರೈ ಹಾಗೂ ರಜತ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು. ಅಧ್ಯಾಪಕ ನಾಗೇಂದ್ರ ಕಾರ‍್ಯಕ್ರಮವನ್ನು ನಿರೂಪಿಸಿದರು.

Exit mobile version