Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ದನ ಕಡಿದು ಮಾಂಸ ದಂಧೆಯಲ್ಲಿ ತೊಡಗಿದ್ದ ಮೂವರ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಡಿ ಕನ್ಯಾನದ ಮನೆಯ ಶೆಡ್‌ನಲ್ಲಿ ಮಾರಾಟ ಮಾಡುವ ಸಲುವಾಗಿ ದನ ಕಡಿದು ಮಾಂಸ ಮಾಡುತ್ತಿದ್ದವರನ್ನು ಮೂವರನ್ನು ಕೋಟ ಪೊಲೀಸ್‌ರು ಬಂಧಿಸಿದ್ದಾರೆ. ಶೆಡ್‌ನಲ್ಲಿ ಎರಡು ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಮುನೀರ್, ಫಿರೋಝ್ ಮತ್ತು ಅಸ್ಲಾಂ ಎಂಬುವವರನ್ನು ಬಂಧಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೋಡಿ ಕನ್ಯಾನದ ಶನೀಶ್ವರ ದೇವಸ್ಥಾನದ ಬಳಿಯ ಮನೆಯೊಂದರಲ್ಲಿ ದನವನ್ನು ಕಡಿಯುವ ಕುರಿತು ಬಂದ ಮಾಹಿತಿ ಮೇರೆಗೆ ಕೋಟ ಪೊಲೀಸ್ ಉಪನಿರೀಕ್ಷಕ ಕಬ್ಬಾಳ್‌ರಾಜ್ ಎಚ್.ಡಿ. ಮತ್ತು ಸಿಬ್ಬಂದಿಗಳು ಮುನಿರ್ ಅವರ ಮನೆಯ ಶೆಡ್‌ಗೆ ತೆರಳಿ ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಒಟ್ಟು ಎರಡು ದನವನ್ನು ಕಡಿಯಲಾಗಿದ್ದು, ಒಂದು ದನವನ್ನು ಸಂಪೂರ್ಣ ಮಾಂಸ ಮಾಡಿದ್ದು, ಇನ್ನೊಂದನ್ನು ಮಾಂಸ ಮಾಡುವ ಸಿದ್ಧತೆಯಲ್ಲಿದ್ದಾಗ ಪೊಲೀಸ್‌ರಿಗೆ ಸಿಕ್ಕಿಬಿದ್ದಿದ್ದಾರೆ. ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮಾಂಸ ಮಾಡಿ ಉದ್ದೇಶದಿಂದ ದನಗಳನ್ನು ಕಡಿಯಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version