ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ವಿಷಯ ಸಂಬಂಧ ತಮಿಳುನಾಡಿನಲ್ಲಿ ಕನ್ನಡಿಗರ ವಿರುದ್ಧ ದಾಳಿ ನಡೆದಿದೆ. ಗಲಭೆಯಲ್ಲಿ ಕುಂದಾಪುರದಿಂದ ದಕ್ಷಿಣ ಭಾರತ ಪ್ರವಾಸಕ್ಕೆಂದು ತೆರಳಿದ್ದ ವಾಹನದ ಗಾಜು ಪುಡಿಗೈದಿರುವುದಲ್ಲದೇ ವಾಹನ ಚಾಲಕ ಮಂಜುನಾಥ ಕುಲಾಲ್ (38) ಎಂಬುವವರಿಗೆ ಹಿಗ್ಗಾಮುಗ್ಗಾ ತಳಿಸಿದ್ದಾರೆ.
ಕುಂದಾಪುರ ತಾಲೂಕಿನ ರಟ್ಟಾಡಿಯ ಮಂಜುನಾಥ ಕುಲಾಲ್ ತಮ್ಮ ಟೆಂಪೂ ಟ್ರಾವೆಲರ್‌ನಲ್ಲಿ ಕುಟುಂಬಿಕರು ಹಾಗೂ ಸ್ನೇಹಿತರು ಸೇರು ಒಟ್ಟು ಹನ್ನೆರಡು ಮಂದಿ ದಕ್ಷಿಣ ಭಾರತದ ಪ್ರವಾಸಕ್ಕೆ ತೆರಳಿದ್ದರು. ತಮಿಳುನಾಡಿನಲ್ಲಿ ಕಾವೇರಿ ಗಲಾಟೆ ಹೆಚ್ಚುತ್ತಿದ್ದಂತೆ ರಾಮೇಶ್ವರಂನಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ನಿಲ್ಲಿಸಿದ್ದ ವಾಹನದ ಮುಂಭಾಗ, ಕಿಟಕಿ ಹಾಗೂ ಹಿಂಬದಿಯ ಗಾಜನ್ನು ಸಂಪೂರ್ಣ ಪುಡಿಗೈದು ಜಖಂಗೊಳಿಸಿದ್ದಾರೆ. ಬಳಿಕ ದೂರದಲ್ಲಿ ನಿಂತಿದ್ದ ಮಂಜುನಾಥ ಕುಲಾಲ್ ಅವರ ಬಳಿ ತೆರಳಿ ’ಕಾವೇರಿ ತಮಿಳುನಾಡಿಗೆ ಸೇರಿದ್ದು’ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ವಾಹನದಲ್ಲಿದ್ದ ಮಂಜುನಾಥ ಕುಲಾಲರ ತಂದೆ ಶೀನ ಕುಲಾಲ್, ತಾಯಿ ಗಿರಿಜಮ್ಮ, ಅಮಾಸೆಬೈಲಿನ ವಿಠ್ಠಲ ಶೆಟ್ಟಿ ಹಾಗೂ ಅವರ ಪತ್ನಿ ಮಗಳು, ಗಂಗೊಳ್ಳಿಯ ಕಾಮತ್ ಕುಟುಂಬದ ಮೂವರು ಇದ್ದು, ಸದಸ್ಯ ತಮಿಳುನಾಡಿನ ಲಾಡ್ಜ್‌ವೊಂದರಲ್ಲಿ ಸುರಕ್ಷಿತವಾಗಿದ್ದಾರೆ. ಹಲ್ಲೆಗಳಗಾದ ಮಂಜುನಾಥ ಕುಲಾಲ್ ಪ್ರಾಣಾಪಾಯದಿಂದ ಪಾರಾಗಿದ್ದು ತಮಿಳುನಾಡಿನ ಪೊಲೀಸ್ ಭದ್ರತೆಯಲ್ಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ತಮಿಳುನಾಡಿನ ನಾಮ್ ತಮಿಳಾರ್ ಇಯಕ್ಕಂ ಎಂಬ ಸಂಘಟನೆ ಹಲ್ಲೆ ನಡೆಸಿ ವಾಹನವನ್ನು ಜಖಂ ಗೊಳಿಸುವರ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿ ಕರ್ನಾಟಕದಲ್ಲಿಯೂ ಗಲಾಟೆ ಆರಂಭವಾಗಿತ್ತು/ಕುಂದಾಪ್ರ ಡಾಟ್ ಕಾಂ ಸುದ್ದಿ/