Kundapra.com ಕುಂದಾಪ್ರ ಡಾಟ್ ಕಾಂ

ನ್ಯಾಶನಲ್ ಪವರ್ ಲಿಫ್ಟಿಂಗ್: ವಿಶ್ವನಾಥ ಗಾಣಿಗ ಅವರಿಗೆ2 ಚಿನ್ನ, ತಲಾ 1 ಬೆಳ್ಳಿ, ಕಂಚು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ನಡೆದ 42ನೇ ಸೀನಿಯರ್ ನ್ಯಾಶನಲ್ ಪವರ್ ಲಿಫ್ಟಿಂಗ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕುಂದಾಪುರ ತಾಲೂಕಿನ ಬಾಳಿಕೆರೆಯ ದೇಹದಾರ್ಢ್ಯ ಪಟು ವಿಶ್ವನಾಥ ಭಾಸ್ಕರ ಗಾಣಿಗ ಅವರು 83 ಕೆಜಿ ವಿಭಾಗದಲ್ಲಿ 2 ಚಿನ್ನದ ಪದಕ ಹಾಗೂ 1 ಬೆಳ್ಳಿ, 1 ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಈಗಾಗಲೇ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್‌ನಲ್ಲಿ ಸ್ಫರ್ಧಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಈತ ಬಾಳಿಕೆರೆಯ ಭಾಸ್ಕರ ಗಾಣಿಗ ಮತ್ತು ಶ್ರೀಮತಿ ಪದ್ಮಾವತಿ ಗಾಣಿಗ ಅವರ ಪುತ್ರರಾಗಿದ್ದಾರೆ. ಬೆಂಗಳೂರಿನ ಸೂಪರ್ ಬಾಡೀಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ

 news-vishwanath-ganiga-balikere

Exit mobile version