Site icon Kundapra.com ಕುಂದಾಪ್ರ ಡಾಟ್ ಕಾಂ

ಗಾನಕುಸುಮ – 2016: ಗ್ರಾಮೀಣ ಭಾಗದ ಸಂಗೀತ ಪ್ರತಿಭೆಗಳಿಗೊಂದು ಸುವರ್ಣಾವಕಾಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿನ ಸಂಗೀತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಕುಸುಮಾ ಫೌಂಡೇಶನ್ ಆಯೋಜಿಸಲಾಗುತ್ತಿರುವ ವಿನೂತನ ಕಾರ್ಯಕ್ರಮ ‘ಗಾನಕುಸುಮ – 2016’ ಸಂಗೀತ ಸ್ವರ್ಧೆಯ ನೊಂದಾವಣಿಗೆ ಪ್ರತಿ ವರ್ಷದಂತೆ ಅರ್ಜಿ ಆಹ್ವಾನಿಸಲಾಗಿದ್ದು, ಕುಂದಾಪುರ ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ಸಂಗೀತದ ಬಗೆಗೆ ಸಾಮಾನ್ಯ ಜ್ಞಾನ, ಅಭಿರುಚಿ ಹಾಗೂ ಆಸಕ್ತಿ ಇರುವ 20ರ ವಯೋಮಾನದೊಳಗಿನ ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿಯ ಚಿತ್ರಗೀತೆಗಳನ್ನು ಹಾಡಲು ಅವಕಾಶವಿದೆ. ಮೂರು ಹಂತಗಳಲ್ಲಿ ಸ್ವರ್ಧೆ ನಡೆಯಲಿದ್ದು ಒಟ್ಟು ಸ್ವರ್ಧಿಗಳಲ್ಲಿ 12 ಮಂದಿಯನ್ನು ಸೆಮಿಪೈನಲ್‌ಗೆ, 6 ಮಂದಿಯನ್ನು ಫೈನಲ್ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಫೈನಲ್‌ನಲ್ಲಿ ಆಯ್ಕೆಯಾದ ಓರ್ವರನ್ನು ‘ಗಾನಕುಸುಮ 2016’ ಎಂದು ಘೋಷಿಸಲಾಗುವುದು ಮತ್ತು ಫೈನಲ್ ಹಂತ ಪ್ರವೇಶಿಸಿದ 6 ಮಂದಿಗೆ ಕುಸುಮಾಂಜಲಿ 2016 ಕಾರ್ಯಕ್ರಮದಲ್ಲಿ ವೃತ್ತಿಪರ ಕಲಾವಿದರೊಂದಿಗೆ ಹಾಡಲು ಅವಕಾಶ ನೀಡಲಾಗುತ್ತದೆ.

ಅಕ್ಟೋಬರ್ 05ನೇ ತಾರೀಕಿನ ಒಳಗಾಗಿ ಶಾಲಾ ಕಾಲೇಜಿನ ಮೂಲಕ ನೀಡಲಾಗಿರುವ ಅರ್ಜಿಯನ್ನು ಭರ್ತಿ ಮಾಡಿ ಕುಸುಮಾ ಫೌಂಡೇಶನ್‌ಗೆ ತಲುಪಿಸಬಹುದು ಅಥವಾ ಇಮೇಲ್/ ಫೋನ್ ಮೂಲಕ ನೊಂದಾಯಿಸಿಕೊಳ್ಳೂವ ಅವಕಾಶವಿದೆ. ಸ್ವರ್ಧೆಗೆ ಯಾವುದೇ ಶುಲ್ಕವಿರುವುದಿಲ್ಲ.  ಈ ಬಗ್ಗೆ ಕುಸುಮಾ ಫೌಂಡೇಶನ್ ಪ್ರವರ್ತಕ ನಳೀನ್‌ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗೆ ಕುಸುಮಾಂಜಲಿಯ ನಿರ್ದೇಶಕಿ ವಿದ್ಯಾ ಅವರನ್ನು ಸಂಪರ್ಕಿಸಬಹುದಾಗಿದೆ.

Exit mobile version