Kundapra.com ಕುಂದಾಪ್ರ ಡಾಟ್ ಕಾಂ

ಒಟ್ಟು 1624 ಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿ ಹುದ್ದೆಗಳು. ಅರ್ಜಿ ಸಲ್ಲಿಸಲು ಮಾಹಿತಿ ಇಲ್ಲಿದೆ

ಕುಂದಾಪ್ರ ಡಾಟ್ ಕಾಂ ಮಾಹಿತಿ.
ಉದ್ಯೋಗಾಕಾಂಕ್ಷಿಗಳ ಬಹು ನಿರೀಕ್ಷಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 (ಜಿಪಿಎಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ಸಂಪೂರ್ಣ ಮಾಹಿತಿ ಕಲೆಹಾಕಿದೆ.

815 ಪಂಚಾಧಿಯಿತಿ ಅಭಿವೃದ್ಧಿ ಅಧಿಧಿಕಾರಿ (ಪಿಧಿಡಿಒ) ಮತ್ತು 809 ಗ್ರಾ.ಪಂ. ಕಾರ್ಯಧಿದರ್ಶಿ ಗ್ರೇಡ್-1 ಹುದ್ದೆ ಸೇರಿ ಒಟ್ಟು 1624 ಹುದ್ದೆಗಳನ್ನು ಸ್ಪರ್ಧಾಧಿತ್ಮಕ ಪರೀಕ್ಷೆ ಮೂಲಕ ನೇರ ನೇಮಧಿಕ ಮಾಡಿಕೊಳ್ಳಲಾಗುತ್ತಿದೆ. ಪದವಿ ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಗಳ ಜಿಲ್ಲಾವಾರು ಹಂಚಿಕೆ:

ಒಟ್ಟು 815 ಪಿಡಿಒ ಹುದ್ದೆಗಳ ಪೈಕಿ 177 ಹುದ್ದೆಗಳನ್ನು ಹೈದರಬಾದ್ ಕರ್ನಾಟಕ ವಿಭಾಗಕ್ಕೆ ಮೀಸಲಿಡಲಾಗಿದೆ. ಅಂತೆಯೇ 809 ಗ್ರಾ.ಪಂ. ಕಾರ್ಯದರ್ಶಿ ಹುದ್ದೆಗಳಲ್ಲಿ 171ಹುದ್ದೆಗಳನ್ನು ಹೈದರಬಾದ್ -ಕರ್ನಾಟಕ ವಿಭಾಗಕ್ಕೆ ಮೀಸಲಿಡಲಾಗಿದೆ.

ಪಿಡಿಒ ಹುದ್ದೆಗಳ ಜಿಲ್ಲಾವಾರು ಹಂಚಿಕೆ: ಚಿಕ್ಕಮಗಳೂರು-71, ಬೆಳಗಾವಿ-26,ಚಿತ್ರದುರ್ಗ-11, ದಕ್ಷಿಣ ಕನ್ನಡ-44,ಧಾರವಾಡ-10, ಹಾಸನ-46, ಕೊಡಗು-18, ಕೋಲಾರ-20, ಮಂಡ್ಯ -37, ಮೈಸೂರು -47, ಶಿವಮೊಗ್ಗ-39,ತುಮಕೂರು-54,ಉತ್ತರ ಕನ್ನಡ-41, ಚಾಮರಾಜನಗರ-31, ದಾವಣಗೆರೆ-15, ಬಾಗಲಕೋಟೆ-15, ಗದಗ-6, ಹಾವೇರಿ-62,ಉಡುಪಿ-22 ಮತ್ತು ಚಿಕ್ಕಬಳ್ಳಾಪುರ-19
ಹೈ-ಕ ವಿಭಾಗ: ಬಳ್ಳಾರಿ-34, ಬೀದರ್-19, ಕಲಬುರಗಿ-51, ಕೊಪ್ಪಳ-23, ರಾಯಚೂರು-27 ಮತ್ತು ಯಾದಗಿರಿ-23 ಕುಂದಾಪ್ರ ಡಾಟ್ ಕಾಂ ಮಾಹಿತಿ.

ಜಿಪಿಎಸ್ ಹುದ್ದೆಗಳ ಜಿಲ್ಲಾವಾರು ಹಂಚಿಕೆ : ಬೆಂಗಳೂರು ನಗರ-12, ಬೆಂಗಳೂರು ಗ್ರಾಮಾಂತರ-18, ಚಿಕ್ಕಮಗಳೂರು-31, ಬೆಳಗಾವಿ-75, ವಿಜಯಪುರ-39, ಚಿತ್ರದುರ್ಗ-37, ದಕ್ಷಿಣ ಕನ್ನಡ-10, ಹಾಸನ-23, ಕೊಡಗು-14, ಮಂಡ್ಯ -49, ಮೈಸೂರು -60, ಶಿವಮೊಗ್ಗ-22, ತುಮಕೂರು-72,ಉತ್ತರ ಕನ್ನಡ-30, ಚಾಮರಾಜನಗರ-30, ದಾವಣಗೆರೆ-3, ಬಾಗಲಕೋಟೆ-21, ಗದಗ-8, ಹಾವೇರಿ-1, ಉಡುಪಿ-23, ರಾಮನಗರ-23 ಮತ್ತು ಚಿಕ್ಕಬಳ್ಳಾಪುರ-16
ಹೈ-ಕ ವಿಭಾಗ: ಬಳ್ಳಾರಿ-33, ಬೀದರ್-24, ಕಲಬುರಗಿ-41, ಕೊಪ್ಪಳ-20, ರಾಯಚೂರು-35 ಮತ್ತು ಯಾದಗಿರಿ-18 ಕುಂದಾಪ್ರ ಡಾಟ್ ಕಾಂ ಮಾಹಿತಿ.

* ಅಭ್ಯರ್ಥಿಗಳು ಈ ಪರೀಕ್ಷೆ ನಡೆಸುವ ಹೊಣೆ ಹೊತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್ಸೈಟಿನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ತಪ್ಪದೇ ಪಾಲಿಸಬೇಕು. ಸೂಚನೆಗಳನ್ನು ಪಾಲಿಸದಿರುವ ಅಭ್ಯರ್ಥಿಗಳು ಅನರ್ಹಗೊಳಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಖಾಲಿ ಇರುವ ಅರ್ಜಿ ನಮೂನೆಯನ್ನು ಪ್ರಾಧಿಕಾರದ ವೆಬ್ಸೈಟಿನಿಂದ ಡೌನ್ಲೋಡ್ ಮಾಡಿ ಅರ್ಜಿ ತುಂಬುವ ವಿಧಾನವನ್ನು ಅಭ್ಯಾಸ ಮಾಡಿಕೊಳ್ಳಬಹುದು.
ಅಭ್ಯರ್ಥಿಗಳು ಅಂತಿಮವಾಗಿ ಸಲ್ಲಿಸುವ ಅರ್ಜಿಯಲ್ಲಿನ ಮಾಹಿತಿ /ವಿವರಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಲಾಗುವುದರಿಂದ ಮಾಹಿತಿಗಳನ್ನು ದಾಖಲಿಸುವ ಸಂದರ್ಭದಲ್ಲಿ ಯಾವುದೇ ತಪ್ಪುಗಳನ್ನು ಮಾಡಬಾರದು ಮತ್ತು ಅಭ್ಯರ್ಥಿಯ ಭಾವಚಿತ್ರ, ಸಹಿ ಮತ್ತು ಎಡಗೈ ಹೆಬ್ಬರಿಳಿನ ಗುರುತು ಹೊರತುಪಡಿಸಿ ಬೇರೆ ಯಾವುದೇ ದಾಖಲೆಗಳನ್ನು / ಪ್ರಮಾಣಪತ್ರಗಳನ್ನು ಅಪ್ ಲೋಡ್ ಮಾಡುವಂತಿಲ್ಲ./ಕುಂದಾಪ್ರ ಡಾಟ್ ಕಾಂ ಮಾಹಿತಿ./

Recruitment details for the post of ‘Panchayath Development Officer‘ and ‘Grama Panchayath Secretary Grade-1

Exit mobile version