Site icon Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಸನ್‌ರೈಸ್ : ನೇಷನ್ ಬಿಲ್ಡರ್ ಪ್ರಶಸ್ತಿ ಪ್ರಧಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಇಂಡಿಯಾ ಲಿಟ್ರಸಿ ಮಿಷನ್ ಅಡಿಯಲ್ಲಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ಕುಂದಾಪುರ ಸರಕಾರಿ ಪ. ಪೂ ಕಾಲೇಜಿನ ಉಪಪ್ರಾಂಶುಪಾಲರಾದ ಅರುಣಕುಮಾರ್ ಶೆಟ್ಟಿಯವರಿಗೆ ಪ್ರಧಾನಿಸಲಾಯಿತು.

ಸನ್‌ರೈಸ್ ಕ್ಲಬ್ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರೋಟರಿ ಸನ್‌ರೈಸ್‌ನ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಸ್ವಾಗತಿಸಿದು. ಸ್ಥಾಪಕಾಧ್ಯಕ್ಷರಾದ ದಿನಕರ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಸ್. ಮಂಜುನಾಥ ಸನ್ಮಾನಿತರನ್ನು ಪರಿಚಯಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರುಣ ಕುಮಾರ ಶೆಟ್ಟಿಯವರು ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆಯ ಈ ಗೌರವ, ನನ್ನನ್ನು ಇನ್ನಷ್ಟು ಹೆಚ್ಚು ಪಾವಿತ್ರ್ಯತೆಯಿಂದ ಶಿಕ್ಷಕ ವೃತ್ತಿ ನಿಭಾಯಿಸಲು ಪ್ರೇರಣೆ ನೀಡಿದೆ ಎಂದರು. ಕಾರ್ಯದರ್ಶಿ ನಾಗೇಶ ನಾವುಡ ವಂದಿಸಿದರು. ಸದಸ್ಯರಾದ ಸದಾನಂದ ಉಡುಪ, ಉಲ್ಲಾಸ ಕ್ರಾಸ್ತ, ಬಿ.ಎಂ. ಚಂದ್ರಶೇಖರ, ಸತೀಶ ಎನ್. ಶೇರೆಗಾರ್, ಎಲ್.ಜೆ. ಫೆರ್ನಾಂಡೀಸ್, ಕೆ.ಹೆಚ್. ಚಂದ್ರಶೇಖರ, ಗಜಾನನ ಭಟ್, ಕಲ್ಪನಾ ಭಾಸ್ಕರ ಮತ್ತಿತರರು ಉಪಸ್ಥಿತರಿದ್ದರು.

Exit mobile version