Site icon Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ಆ್ಯಂಬುಲೆನ್ಸ್‌ ಢಿಕ್ಕಿ ; ಮಹಿಳೆ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿರೂರು ತೌಹೀದ್‌ ಶಾಲೆಯ ಬಳಿ ರವಿವಾರ ಮುಂಜಾನೆ ಸುಮಾರು 3 ಗಂಟೆಗೆ ಆ್ಯಂಬುಲೆನ್ಸ್‌ ಹಾಗೂ ಮಾರುತಿ ಕಾರುಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಓರ್ವರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇರಳದ ನಿವಾಸಿ ಜಗದಾಂಬಿಕಾ (45) ಮೃತಪಟ್ಟ ವರು. ಕಾರು ಚಾಲಕ ಗೌತಮ್‌, ಅಯ್ಯಪ್ಪ, ಅಂಬಾರಿ ಹಾಗೂ ಅನುಶ್ರೀ ಹಾಗೂ ಗಾಯಗೊಂಡ ವರು. ಐವರು ಕೇರಳದಿಂದ ಪ್ರವಾಸಕ್ಕಾಗಿ ಆಗಮಿಸಿ ಬೆಂಗಳೂರು ಸಾಗರ ರಸ್ತೆಯಲ್ಲಿ ಆಗಮಿಸಿ ಕೊಲ್ಲೂರಿಗೆ ತೆರಳುತ್ತಿದ್ದರು. ಭಟ್ಕಳದ ಸರಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್‌ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿ ಭಟ್ಕಳಕ್ಕೆ ಹಿಂದಿರುಗುತ್ತಿದ್ದ ವೇಳೆ ಬೈಂದೂರಿನಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಮಾರುತಿ ಕಾರು ಢಿಕ್ಕಿ ಹೊಡೆದಿತ್ತು. ಢಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುನುಜ್ಜಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version