Kundapra.com ಕುಂದಾಪ್ರ ಡಾಟ್ ಕಾಂ

ಕೋಟೆಶ್ವರ: ಸಿಂಚನ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಲ್ಲಿ ಒಬ್ಬರಲ್ಲಿ ಒಂದೊದು ಪ್ರತಿಭೆಗಳು ಇರುತ್ತದೆ ಅದನ್ನು ಗುರುತಿಸುವುದು ಮಖ್ಯು ಅದರಿಂದ ಕಾಲೇಜಿನಲ್ಲಿ ನಡೆಯುವ ಪಠೇತ್ಯರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಗಳನ್ನು ತೋರಿಸುವುದರ ಮೂಲಕ ವಿದ್ಯಾರ್ಥಿ ಜೀವನವನ್ನು ಉಜ್ವಲಗೊಳಿಸಲು ಸಾಧ್ಯ ಅದರಿಂದ ಸಿಕ್ಕ ಅವಕಾಶಗಳನ್ನು ಸದುಉಪಯೋಗ ಪಡೆದುಕೊಂಡಗ ಮಾತ್ರ ಮುಂದೆ ಯಶ್ವಸಿಯಾಗಲು ಸಾಧ್ಯ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.

ಅವರು ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ, ಶೆಟ್ಟಿ ಸರಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ನಡೆದ ಸಿಂಚನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಶ್ರೀ ಕಾಳಾವರ ವರದರಾಜ ಎಂ, ಶೆಟ್ಟಿ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆ ವಹಿದರು. ಸಾಂಸ್ಕೃತಿ ಸಮಿತಿ ಸಂಚಾಲಕಿ ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಉಷಾದೇವಿ ಜೆ.ಎಸ್ ಉಪಸ್ಥಿತರಿದರು. ಅತಿಥಿ ಉಪನ್ಯಾಸಕ ರಂಜಿತ್ ಕುಮಾರ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಅಡಿಗ ಸ್ವಾಗತಿಸಿ, ರವಿಚಂದ್ರ ಹೆಚ್.ಎಸ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಅದ್ದೂರಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಜರುಗಿತ್ತು. ತಿರ್ಪುಗಾರರಾಗಿ ಗಣೇಶ ಗಂಗೊಳ್ಳಿ, ಜಯಪ್ರಕಾಶ ಮಡಪಾಡಿ, ರಾಘು ವಿಠಲವಾಡಿ ಭಾಗವಹಿಸಿದರು.

Exit mobile version