Kundapra.com ಕುಂದಾಪ್ರ ಡಾಟ್ ಕಾಂ

ನಿವೃತ್ತ ಅಧ್ಯಾಪಕ ಕೊರಗಯ್ಯ ಶೆಟ್ಟಿ ಅವರಿಗೆ ಯಜ್ಞ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರುವಿನಲ್ಲಿ ಅಧ್ಯಾಪಕನಾಗಿ 2 ದಶಕಗಳ ಕಾಲ ಸೇವೆ ಸಲ್ಲಿಸಿದ ದಿನಗಳು ನನ್ನ ಬದುಕಿನಲ್ಲಿ ಸದಾ ಅಚ್ಚಳಿಯದೇ ಉಳಿದ ಮಧುರ ನೆನಪುಗಳಾಗಿವೆ. ಇಲ್ಲಿನ ಜನರು, ವಿದ್ಯಾರ್ಥಿಗಳು ಅಪಾರ ಪ್ರೀತಿಯನ್ನು ಕೊಟ್ಟಿರುವ ಜೊತೆಗೆ ಇದೀಗ ಯಜ್ಞ ಪ್ರಶಸ್ತಿ ನೀಡಿ ಗೌರವಿಸಿರುವುದು ಸೇವೆಗೆ ಸಂದ ಫಲವೆಂದು ಸಾರ್ಥಕ ಭಾವ ತುಂಬಿದೆ ಎಂದು ನಿವೃತ್ತ ಅಧ್ಯಾಪಕ ಕೊರಗಯ್ಯ ಶೆಟ್ಟಿ ಹೇಳಿದರು.

ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿ.ಯಜ್ಞನಾರಾಯಣ ಐತಾಳ್‌ರ ಸ್ಮರಣಾರ್ಥ ಕೊಡಮಾಡುವ ಯಜ್ಞ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದರು.
ಭಾರತೀಯ ಜೀವ ವಿಮಾ ನಿಗಮ ಶಿವಮೊಗ್ಗ ಶಾಖೆಯ ಅಭಿವೃದ್ಧಿ ಅಧಿಕಾರಿ ರವೀಂದ್ರ ಐತಾಳ್ ಮಾತನಾಡಿ ದಿ.ಯಜ್ಞನಾರಾಯಣ ಐತಾಳ್‌ರು ಉಪ್ಪಿನಕುದ್ರುವಿನಲ್ಲಿ ಫ್ರೌಡಶಾಲೆಯ ನಿರ್ಮಾಣಕ್ಕೆ ಅವಿರತ ಶ್ರಮವಹಿಸಿರುವುದನ್ನು ಸ್ಮರಿಸಿಕೊಂಡು ಅವರು ಊರು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿ ದೃಷ್ಠಿಯಿಂದ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದರು. ಅವರ ಮಕ್ಕಳಾಗಿ ತುಂಬು ಅಭಿಮಾನದಿಂದ ದಿ.ಯಜ್ಞನಾರಾಯಣ ಐತಾಳ್‌ರ ಹೆಸರಿನಲ್ಲಿ ಸಾಧಕ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.

ತೆರಿಗೆ ಸಲಹೆಗಾರರಾದ ರಾಮಕೃಷ್ಣ ಐತಾಳ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಸಂತೋಷ ಕೋಣಿ, ವಾಸುದೇವ ಐತಾಳ್, ರಮೇಶ್ ಐತಾಳ್, ಪ್ರಭಾಕರ ಮಧ್ಯಸ್ಥ, ವಿದ್ಯಾ ಐತಾಳ್, ನಳಿನಿ ಐತಾಳ್ ಇನ್ನಿತರರು ಉಪಸ್ಥಿತರಿದ್ದರು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೊಂಬೆಯಾಟ ಕಲಾವಿದ ರಾಜೇಂದ್ರ ಪೈ ಪ್ರಶಸ್ತಿ ಪತ್ರ ವಾಚಿಸಿದರು. ಅಧ್ಯಾಪಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿ, ಅಧ್ಯಾಪಕ ಉದಯ ಭಂಡಾರ್‌ಕರ್ ವಂದಿಸಿದರು. ಬಳಿಕ ಶಿರಸಿಯ ಶ್ರೀ ಅನ್ನಪೂರ್ಣೆಶ್ವರಿ ಅಂಧ ಕಲಾವಿದರಿಂದ ಗೀತ ಗಾಯನ ನಡೆಯಿತು.

Exit mobile version