Kundapra.com ಕುಂದಾಪ್ರ ಡಾಟ್ ಕಾಂ

ಶಿಕ್ಷಕರು ಕನ್ನಡ ಭಾಷೆಯ ಕಲಿಕೆಯ ತೊಡಕು ಗುರುತಿಸಿ ಅವುಗಳನ್ನು ಮೀರಿ ಕಲಿಸಬೇಕಿದೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ವಲಯದ ಪ್ರೌಢಶಾಲೆಗಳ ಕನ್ನಡ ಬೋಧಕರ ಒಂದು ದಿನದ ಕಾರ್ಯಾಗಾರವು ಮರವಂತೆಯ ಸುಭಾಶ್ಚಂದ್ರ ಬೋಸ್ ಸರಕಾರಿ ಫೌಢಶಾಲೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಜನಾರ್ದನ ಶಿಕ್ಷಕರು ಕನ್ನಡ ಭಾಷೆಯ ಕಲಿಕೆಗೆ ಎದುರಾಗುವ ತೊಡಕುಗಳನ್ನು ಗುರುತಿಸಿಕೊಂಡು ಅವುಗಳನ್ನು ಮೀರುವ ಪ್ರಯತ್ನ ನಡೆಸಬೇಕು. ಕಾರ್ಯಾಗಾರದಲ್ಲಿ ಅದರ ಕುರಿತು ಚರ್ಚೆ ನಡೆಯಲಿ ಮತ್ತು ಕನ್ನಡ ಭಾಷೆಯ ಪರಿಣಾಮಕಾರಿ ಬೋಧನೆಯ ಮಾರ್ಗ ಹೊರಹೊಮ್ಮಲಿ ಎಂದು ಆಶಿಸಿದರು. ಕಾರ್ಯಾಗಾರದ ಸಹ ಪ್ರಾಯೋಜಕ ಉದ್ಯಮಿ ಮನ್ಸೂರ್ ಇಬ್ರಾಹಿಮ್ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಸರ್ವೋತ್ತಮ ಭಟ್ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ವಂದಿಸಿದರು. ಚಂದ್ರ ಡಿ. ನಿರೂಪಿಸಿದರು. ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ಡಾ. ಕಿಶೋರಕುಮಾರ ಶೆಟ್ಟಿ ಮತ್ತು ಉಪ್ಪುಂದದ ಕನ್ನಡ ಶಿಕ್ಷಕ ನಾಗರಾಜ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

Exit mobile version