Kundapra.com ಕುಂದಾಪ್ರ ಡಾಟ್ ಕಾಂ

ಗಾಂಧೀಜಿಯವರ ಜೀವನಾದರ್ಶ ಅನುಕರಣೀಯ: ಎಸ್. ರಾಜು ಪೂಜಾರಿ

ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಾಂಧಿ ಜಯಂತಿ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತನ್ನ ಸರಳ ಜೀವನದ ಮೂಲಕ ವಿಶ್ವಕ್ಕೆ ಶಾಂತಿ ಮಾರ್ಗವನ್ನು ತೋರಿದ ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ತತ್ವಾದರ್ಶಗಳು ಸದಾ ಅನುಕರಣೀಯ. ಗಾಂಧೀಜಿಯನ್ನು ನೆನೆಯುವುದೆಂದರೆ ಅವರ ಆದರ್ಶಗಳ ಸ್ಮರಿಸಿದಂತೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿಯ ಪೋಟೋಗೆ ಪುಪ್ಪಾರ್ಚನೆಗೈದು ಮಾತನಾಡಿ ಯುವ ಜನತೆ ಮಹಾತ್ಮರ ಬದುಕಿನ ಅಧ್ಯಾಯಗಳ ಬಗೆಗೆ ಚಿಂತಿಸುವುದಲ್ಲದೇ ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು.

ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ವಿಜಯ ಶೆಟ್ಟಿ, ಯಡ್ತರೆ ಗ್ರಾ.ಪಂ ಸದಸ್ಯರುಗಳಾದ ನಾಗರಾಜ ಶೆಟ್ಟಿ, ಸುಧಾಕರ ದೇವಾಡಿಗ, ಬೈಂದೂರು ಕಾಂಗ್ರೆಸ್ ಮುಖಂಡ ವಾಸುದೇವ ಯಡಿಯಾಳ್ ಮೊದಲಾದವರು ಉಪಸ್ಥಿತಿದ್ದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು.

_mg_1509

Exit mobile version