Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಂಗಡಿಯಲ್ಲಿರಿಸಿದ್ದ 7 ಅಪ್ ಬಾಟಲಿ ಸ್ಟೋಟ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಾರಟಕ್ಕೆಂದು ಅಂಗಡಿಯಲ್ಲಿ ಇರಿಸಲಾಗದ್ದ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಸಿಡಿದು ಆಗಸದೆತ್ತರಕ್ಕೆ ಹಾರಿದ ಘಟನೆ ತಾಲೂಕಿನ ಗಂಗೊಳ್ಳಿಯಲ್ಲಿ ವರದಿಯಾಗಿದೆ. ಗಂಗೊಳ್ಳಿಯ ರಥಭೀದಿಯ ಉದ್ಯಮಿ ಜಿ. ಮನೋಹರ ಶೆಣೈ ಅವರ ದಿನಸಿ ಅಂಗಡಿಯಲ್ಲಿ ಇರಿಸಲಾಗಿದ್ದ ಸೆವೆನ್ ಅಪ್ ಕಂಪೆನಿಯ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಇದ್ದಕ್ಕಿದ್ದಂತೆ ಸಿಡಿದು ಹೋಗಿವೆ.

ಬಾಂಬ್ ಸ್ಟೋಟವಾದಂತೆ ಪ್ಲಾಸ್ಟಿಕ್ ಬಾಟಲಿಗಳು ಬುಡದಲ್ಲಿ ಒಡೆದು ಮೇಲಕ್ಕೆ ಹಾರಿದೆ. ಅಂಗಡಿಯ ಮೇಲ್ಛಾವಣಿಗೆ ಸ್ವಲ್ಪ ಹಾನಿಯಾಗಿದೆ. ಸುಮಾರು ನಾಲ್ಕೈದು ಬಾಟಲಿಗಳು ಇದ್ದಕ್ಕಿಂದತೆ ಇದೇ ರೀತಿಯಾಗಿ ಒಡೆದು ಹೋಗಿದ್ದು ಅಂಗಡಿ ಮಾಲೀಕರು ಘಟನೆ ನೋಡಿ ಅಚ್ಚರಿಗೊಳಗಾಗಿದ್ದಾರೆ. ಉಳಿದ ಬಾಟಲಿಗಳನ್ನು ಕಂಪೆನಿಯ ಡೀಲರ್‌ಗೆ ಹಿಂದಿರುಗಿಸಿದ್ದಾರೆ. ಬಾಟಲಿಗಳು ಒಡೆದು ಹಾರಲು ಕಾರಣವೇನು ಎಂಬುದು ಮಾತ್ರ ಪತ್ತೆಯಾಗಿಲ್ಲ./ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version