Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿಯ ಮಹಾಸತಿ ಪ್ರಾಥಮಿಕ ಮೀನುಗಾರ ಮಹಿಳಾ ಸಹಕಾರಿ ಸಂಘದ ಮಹಾಸಭೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿಯ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ೨೦೧೫-೧೬ನೇ ಸಾಲಿನ ಮಹಾಸಭೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶಾರದಾ ಎಸ್.ಖಾರ್ವಿ ಮಾತನಾಡಿ, ಸಂಘದ ಪಾಲುದಾರರಿಗೆ ಶೇ.೧೦ರಂತೆ ಡಿವಿಡೆಂಡ್ ನೀಡಲು ನೀಡಲು ನಿರ್ಧರಿಸಿದ್ದು, ಸರಕಾರದಿಂದ ಮಹಿಳೆಯರಿಗೆ ಹಾಗೂ ಸಂಘದ ಸದಸ್ಯರಿಗೆ ದೊರೆಯುವ ವಿವಿಧ ಯೋಜನೆಗಳ ಪ್ರಯೋಜನವನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದರು.

ಸಂಘದ ಉಪಾಧ್ಯಕ್ಷೆ ಮಾಲತಿ ಜಿ.ಖಾರ್ವಿ, ನಿರ್ದೇಶಕಿಯರಾದ ನೀಲಾವತಿ ಎಸ್.ಖಾರ್ವಿ, ಶಾರದಾ ಆರ್.ಹೆಗ್ಡೆ, ಶೈಲಾ ಎಂ.ಖಾರ್ವಿ, ಜಯಂತಿ ಆರ್.ಪಟೇಲ್, ದೀಪಾ ಎಸ್.ಖಾರ್ವಿ, ರೇಖಾ ಜಿ.ಖಾರ್ವಿ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ೨೦ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.

ನಿರ್ದೇಶಕಿ ಪಾರ್ವತಿ ಬಿ.ಖಾರ್ವಿ ಸ್ವಾಗತಿಸಿದರು. ಸಂಘದ ಲೆಕ್ಕಿಗ ರವಿಚಂದ್ರ ಖಾರ್ವಿ ಅವರು ೨೦೧೬-೧೭ನೇ ಸಾಲಿನ ಆಯವ್ಯಯ ಅಂದಾಜು ಬಜೆಟ್ ಮತ್ತು ೨೦೧೫-೧೬ನೇ ಸಾಲಿನ ಲಾಭಾಂಶ ವಿಂಗಡಣೆಯನ್ನು ಮಂಡಿಸಿದರು. ಸಂಘದ ಕಾರ್ಯದರ್ಶಿ ಗಣಪತಿ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಸುಶೀಲಾ ಎ.ಖಾರ್ವಿ ವಂದಿಸಿದರು.

Exit mobile version