Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಅಘಫಾತದಲ್ಲಿ ಹಿಮಾಂಶುವಿನ ಬ್ರೈನ್ ಡೆಡ್, ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಣಿಪಾಲ ಸಮೀಪ ಮಣ್ಣಪಳ್ಳದ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಂದೂರಿನ ಖ್ಯಾತ ಮಕ್ಕಳ ತಜ್ಞ ಡಾ. ರವಿರಾಜ್ ಅವರ ಪುತ್ರ ಹಿಮಾಂಶು ರಾವ್ (16) ಅವರ ಬ್ರೈನ್ ಡೆಡ್ ಆಗಿದ್ದು, ಆತನ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿದ್ದಾರೆ.

ಹಿಮಾಂಶುವಿನ ಕಣ್ಣು (ಕಾರ್ನಿಯಾ), ಕಿಡ್ನಿ, ಲಿವರ್ ದಾನ ಮಾಡಲು ನಿರ್ಧರಿಸಲಾಗಿದ್ದು ಸೋಮವಾರ ಬೆಳಿಗ್ಗೆ ಗ್ರೀನ್ ಕಾರಿಡಾರ್ ಮೂಲಕ, ಝೀರೊ ಟ್ರಾಫಿಕ್ ನಲ್ಲಿ 6 ಗಂಟೆಗೆ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಗಂಭೀರ ಗಾಯಗೊಂಡ ಹಿಮಾಂಶುವನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅಫಘಾತದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ಶಿರ್ವ (19) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಸಹ ಸವಾರ ಹಿಮಾಂಶುವಿಗೆ ಗಂಭೀರವಾಗಿ ಗಾಯಗಳಾಗಿ ಬ್ರೈನ್ ಡೆಡ್ ಆಗಿತ್ತು. ನೋವಿನಲ್ಲಿಯೂ ಪೊಷಕರು ಅಂಗಾಂಗದಾನಕ್ಕೆ ಮುಂದಾಗುವ ಮೂಲಕ ಮಾದರಿ ಕಾರ್ಯವೆಸಗಿದ್ದಾರೆ.

Exit mobile version