Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ಶಾಲೆ ವಿದ್ಯಾರ್ಥಿಗಳಿಗೆ ಎಲ್‌ಐಸಿ ಸ್ಟೂಡೆಂಟ್ ಆಫ್ ದಿ ಇಯರ್ ಅವಾರ್ಡ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜೀವ ವಿಮಾ ನಿಗಮ ಕೊಡಮಾಡುವ ಸ್ಟೂಡೆಂಟ್ ಆಫ್ ದಿ ಇಯರ್ ಅವಾರ್ಡ್‌ನ್ನು ಶತಮಾನೋತ್ಸವ ಆಚರಿಸುತ್ತಿರುವ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಭಾರತೀಯ ಜೀವ ವಿಮಾ ನಿಗಮ ಕುಂದಾಪುರದ ಹಿರಿಯ ಶಾಖಾಧಿಕಾರಿ ಕೃಷ್ಣ ವಿ. ಕುಲಕರ್ಣಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿದ್ದು, ಭೀಮಾ ಗ್ರಾಮ ಯೋಜನೆ, ಭೀಮಾ ಶಾಲೆ ಯೋಜನೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನಗಳನ್ನು ನೀಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳ ಬೇಕೆಂದು ತಿಳಿಸಿದರು.

ಮುಖ್ಯ ಜೀವ ವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ವಿಮಾ ಪಾಲಿಸಿಗಳನ್ನು ಮಾಡುವುದರೊಂದಿಗೆ ದೀರ್ಘಕಾಲಿಕ ಉಳಿತಾಯದ ಮನೋಭಾವನೆಯನ್ನು ಬೆಳಸಿಕೊಳ್ಳಿ, ಇಂದಿನ ಚಿಕ್ಕ ಉಳಿತಾಯ ಮುಂದಿನ ಸಧೃಢ ಆರ್ಥಿಕತೆಯ ಮೆಟ್ಟಿಲು ಎಂದರು

ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮ ಕುಂದಾಪುರದ ಸಹಾಯಕ ಶಾಖಾಧಿಕಾರಿ ಗುರುರಾಜ್ ಎಂ. ಎ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರ ರಾಯಪ್ಪನಾಡಿ, ಮುಖ್ಯ ಶಿಕ್ಷಕಿ ಮೋಹಿನಿ ಬಾಯಿ, ಸಹಾಯಕ ಶಿಕ್ಷಕರಾದ ಶ್ರೀನಿವಾಸ ಎಚ್, ರಾಜು ಎನ್, ಆಶಾ, ನಾಗವೇಣಿ, ಭಾರತಿ, ನಾಗರತ್ನ ಮತ್ತು ಅಂಬಿಕಾ ಇನ್ನಿತರರು ಉಪಸ್ಥಿತರಿದ್ದರು.

Exit mobile version