Kundapra.com ಕುಂದಾಪ್ರ ಡಾಟ್ ಕಾಂ

ಜಿ. ಪಂ. ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿಗೆ ಹೂಟ್ಟೂರ ಸಮ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿದ್ದಾಪುರ: ಹಾಲಾಡಿಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಧಾರ್ಮಿಕ ಸಭೆಯಲ್ಲಿ ಸಿದ್ದಾಪುರ ಜಿ. ಪಂ. ಕ್ಷೇತ್ರದ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ ಅವರಿಗೆ ಹೂಟ್ಟೂರು ಸಮ್ಮಾನ ಕಾರ್ಯಕ್ರಮ ಜರಗಿತು.
ದಾಂಡೇಲಿಯ ಉದ್ಯಮಿ ಎಸ್. ಪ್ರಕಾಶ ಶೆಟ್ಟಿ ಗೈನಾಡಿಮನೆ ಶಾರದೋತ್ಸವ ಸಮಿತಿಯ ಧಾರ್ಮಿಕ ಸಭೆ ಉದ್ಘಾಟಿಸಿದರು.

ಶಾರದೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಹಾಲಾಡಿ ಗ್ರಾ. ಪಂ. ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಧಾರ್ಮಿಕ ಪ್ರಜ್ಞೆಗಳು ಅಗತ್ಯ. ಇಂತಹ ಧಾರ್ಮಿಕ ಪ್ರಜ್ಞೆಗಳಿಂದಾಗಿ ಶಾರದೋತ್ಸವವು ೩೨ವರ್ಷಗಳ ಕಾಲ ನಡೆದು ಬಂದಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದುಂದುವೆಚ್ಚ ಮಾಡಬಾರದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಶ್ಲಿಲವಾದ ಪದ್ಯ ಹಾಗೂ ನತ್ಯಗಳನ್ನು ಮಾಡಬಾರದು. ಹೆಚ್ಚಾಗಿ ಧಾರ್ಮಿಕ ಕಾರ್ಯಗಳಿಗೆ ಸಂಬಂಽಸಿದ ಕಾರ್ಯಗಳನ್ನೇ ಮಾಡಬೇಕು. ಹೂಟ್ಟೂರು ಸಮ್ಮಾನ ಸ್ವೀಕರಿದ ಹಾಲಾಡಿ ತಾರಾನಾಥ ಶೆಟ್ಟಿ ಅವರ ಜನ್ಮಭೂಮಿ ಹಾಲಾಡಿಯಾದರೂ, ಕರ್ಮ ಭೂಮಿ ಸಿದ್ದಾಪುರ ಪರಿಸರ. ಸಿದ್ದಾಪುರ ಪರಿಸರದ ಜನತೆ ತಾರಾನಾಥ ಶೆಟ್ಟಿ ಅವರನ್ನು ಜಿ. ಪಂ. ಸದಸ್ಯನಾಗಿ ಮಾಡಿದ್ದಕ್ಕೆ, ಹಾಲಾಡಿ ಜನತೆಯ ಪರವಾಗಿ ಕೃತಜ್ಞ್ಞತೆಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಹಾಲಾಡಿ- ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಽಕಾರಿ ಬಿ. ಮಂಜುನಾಥ ಕಾಮತ್, ತಾ. ಪಂ. ಸದಸ್ಯೆ ಸವಿತಾ ಸಂತೋಷ್ ಮೊಗವೀರ, ಹಾಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಚ್. ರಮೇಶ್ ಭಟ್, ಮುಖ್ಯ ಶಿಕ್ಷಕಿ ಜ್ಯೋತಿ ಜಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎಚ್. ಪಂಜು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಹಾಲಾಡಿ ಗ್ರಾ. ಪಂ. ವ್ಯಾಪ್ತಿಯ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಶಕ್ತರಿಗೆ ಆರ್ಥಿಕ ನೆರವು ನೀಡಲಾಯಿತು. ಶಾರದೋತ್ಸವ ಸಮಿತಿಯ ಸದಸ್ಯ ಸೂರ್ಯಪ್ರಕಾಶ ದಾಮ್ಲೆ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ ಶೆಟ್ಟಿ ಬೆಳಗೋಡು ಕಾರ್ಯಕ್ರಮ ನಿರೂಪಿಸಿದರು. ಆನಂದ ಮುಲ್ಲಿಮನೆ ವಂದಿಸಿದರು.

Exit mobile version